ಚೆನ್ನೈ:
ಮದ್ರಾಸ್‌ನ ಐಐಟಿಯ ಹಾಸ್ಟೆಲ್ ರೂಂನಲ್ಲಿ ವಿದ್ಯಾರ್ಥಿಯೊಬ್ಬಳ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ಪ್ರಾಥಮಿಕವಾಗಿ ಇದೊಂದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ ಎಂದಿದ್ದಾರೆ ಆದರೆ, ಇದುವರೆಗೂ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಅವರು ಹೇಳಿದರು.ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ವಿದ್ತಾರ್ಥಿನಿಯ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ, ಇನ್ನೂ ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ.
ಮೃತ ವಿದ್ಯಾರ್ಥಿಯೂ ಕೇರಳದವರೆಂದು ಪೊಲೀಸರು ತಿಳಿಸಿದ್ದಾರೆ.ಸಾವಿನ ಬಗ್ಗೆ ಮದ್ರಾಸ್‌ನ ಐಐಟಿಯವರನ್ನು ಕೇಳಿದ ಪ್ರಶ್ನೆಗೆ ಅವರು ವಿದ್ಯಾರ್ಥಿನಿಯೂ ಎಂ ಏ ವಿಭಾಗದ ಪ್ರಥಮ ವರ್ಷದ ಪದವಿಪೂರ್ವ ವಿದ್ಯಾರ್ಥಿನಿಯಾಗಿದ್ದಾರೆ ಮತ್ತು ಅವರು ಕೇರಳ ಮೂಲದವರಾಗಿದ್ದು ಅವರ ನಿಧನ ವಾರ್ತೆಯನ್ನು ತಿಳಿಸಬೇಕಾಗಿರುವುದು ತೀವ್ರ ದುಃಖ ಸಂಗತಿಯಾಗಿದೆ ಎಂದಿದೆ. ಐಐಟಿ ಮದ್ರಾಸ್ ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ತಮ್ಮ ಆತ್ಮೀಯ ಸಂತಾಪವನ್ನು ಕುಟುಂಬ, ಸ್ನೇಹಿತರು ಮತ್ತು ಮೃತ ವಿದ್ಯಾರ್ಥಿಯ ಹತ್ತಿರದ ಮತ್ತು ಆತ್ಮೀಯರಿಗೆ ತಿಳಿಸಿದ್ದಾರೆ. ಇದು ನಿಜಕ್ಕೂ ಸಂಸ್ಥೆ ಮತ್ತು ಕುಟುಂಬಕ್ಕೆ ಭರಿಸಲಾಗದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದೆ “.ಇನ್ನೂ ಡಿಸೆಂಬರ್ 2018 ರಿಂದ ಈವರೆಗೆ ಐಐಟಿ ಮದ್ರಾಸ್‌ನಲ್ಲಿ ಇದು 5ನೇ ಆತ್ಮಹತ್ಯೆ ಪ್ರಕರಣವಾಗಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ