ಖಾಸಗಿ ಕಂಪನಿ ಮಾಲೀಕರಿಗೆ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್..!

ನವದೆಹಲಿ:

       ಲಾಕ್ ಡೌನ್ ಸಂದರ್ಭದಲ್ಲಿ ವೇತನ ಪಾವತಿಸಲು ವಿಫಲವಾದ ಖಾಸಗಿ ಕಂಪೆನಿಗಳ ಮಾಲೀಕರಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ ,ಕೆಲಸಗಾರರಿಗೆ ವೇತನ ನೀಡದಿರುವ ಕಂಪೆನಿಗಳ ಮಾಲೀಕರ ವಿರುದ್ಧ ಜುಲೈ ಕೊನೆಯವರೆಗೆ ಕಠಿಣ ಕ್ರಮ ತೆಗೆದುಕೊಳ್ಳಬಾರದು ಎಂದು ಆದೇಶ ನೀಡಿದೆ.

     ವೇತನ ಪಾವತಿ ವಿಚಾರದಲ್ಲಿ ಕಂಪೆನಿ ಮಾಲೀಕರು ಮತ್ತು ಕೆಲಸಗಾರರ ಮಧ್ಯೆ ಹೊಂದಾಣಿಕೆಯ ಒಪ್ಪಂದವೇರ್ಪಡಲು ರಾಜ್ಯ ಸರ್ಕಾರಗಳು ಸಹಾಯ ಮಾಡಬೇಕಾಗಿದ್ದು ಸಂಬಂಧಪಟ್ಟ ಕಾರ್ಮಿಕ ಆಯುಕ್ತರಿಗೆ ವರದಿ ಸಲ್ಲಿಸಬೇಕು ಎಂದು ಹೇಳಿದೆ.

    ಲಾಕ್ ಡೌನ್ ಸಮಯದಲ್ಲಿ ಕೆಲಸಗಾರರಿಗೆ ಕಡ್ಡಾಯವಾಗಿ ಸಂಪೂರ್ಣ ವೇತನ ನೀಡಬೇಕೆಂದು ಮಾರ್ಚ್ 29ರಂದು ಹೊರಡಿಸಿದ್ದ ಆದೇಶದ ಕಾನೂನು ಬದ್ಧತೆ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 4 ವಾರಗಳ ಹೆಚ್ಚುವರಿ ಕಾಲಾವಕಾಶವನ್ನು ಸಹ ಇದೇ ಸಂದರ್ಭದಲ್ಲಿ ನೀಡಿದೆ.

    ಕಳೆದ ಮಾರ್ಚ್ 29ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ, ಕೊರೋನಾ ಲಾಕ್ ಡೌನ್ ಸಮಯದಲ್ಲಿ ಕೆಲಸಗಾರರಿಗೆ ಕಂಪೆನಿಗಳು ವೇತನ ಕಡಿತ ಮಾಡದೆ ಸಂಪೂರ್ಣ ನೀಡಬೇಕು ಎಂದು ಹೇಳಿತ್ತು.

    ಇಲ್ಲಿ ಉದ್ಯಮಿಗಳು ಮತ್ತು ಕಾರ್ಮಿಕರಿಗೆ ಪರಸ್ಪರ ಅಗತ್ಯವಿದೆ ಎಂದು ವಾದಿಸಲಾಗುವುದಿಲ್ಲ. 50 ದಿನಗಳವರೆಗೆ ವೇತನ ಪಾವತಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ , ಸಂಜಯ್ ಕಿಶನ್ ಕೌಲ್ ಮತ್ತು ಎಂಆರ್ ಶಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap