ಕ್ರಿಪ್ಟೋಕರೆನ್ಸಿ ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ

     ಕ್ರಿಪ್ಟೋಕರೆನ್ಸಿ ಬಳಕೆ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿ ಆದೇಶನೀಡಿದೆ .ಜಸ್ಟೀಸ್ ರೋಹಿಂಗ್ಟನ್ ನಾರಿಮನ್ ಅವರಿದ್ದ ತ್ರಿಸದಸ್ಯ ಪೀಠವು ರಿಸರ್ವ್ ಬ್ಯಾಂಕ್ ಹೇರಿದ್ದ ನಿಷೇಧವನ್ನು ಇಂದು ರದ್ದುಗೊಳಿಸಿದೆ. ಡಿಜಿಟಲ್ ಕರೆನ್ಸಿಯಾಗಿರುವ ಕ್ರಿಪ್ಟೋಕರೆನ್ಸಿಯಲ್ಲಿ ಎನ್ಕ್ರಿಪ್ಷನ್ ತಂತ್ರಜ್ಞಾನ ಬಳಸಿ ಕರೆನ್ಸಿ ಯೂನಿಟ್ ಗಳನ್ನು ಸೃಷ್ಟಿಸಲಾಗುತ್ತದೆ, ಪ್ರತಿ ವ್ಯವಹಾರವೂ ಸುರಕ್ಷಿತವಾಗಿದ್ದು, ಆರ್ ಬಿಐ ಸಂಪರ್ಕವಿಲ್ಲದೆ, ಸ್ವತಂತ್ರವಾಗಿ ವ್ಯವಹರಿಸಬಹುದಾಗಿದೆ.

     2018ರ ಏಪ್ರಿಲ್ 6ರಂದು ಅಧಿಸೂಚನೆ ಹೊರಡಿಸಿದ ಆರ್ ಬಿಐ, ಕ್ರಿಪ್ಟೋಕರೆನ್ಸಿ ಬಳಕೆ, ವ್ಯವಹಾರ, ಪ್ರಚಾರ ಎಲ್ಲಕ್ಕೂ ನಿಷೇಧ ಹೇರಿತ್ತು. ದೇಶದಲ್ಲಿ ಬಿಟ್ ಕಾಯಿನ್ ವ್ಯವಹಾರವನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗಿತ್ತು. ಈ ನಿಷೇಧದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕಂಪನಿಗಳಿಗೆ ಇಂದು ಜಯ ಸಿಕ್ಕಿದ್ದರಿಂದ ಬಿಟ್ ಕಾಯಿನ್ ಚಲಾವಣೆ ಅಧಿಕೃತವಾಗಿ ಮತ್ತೆ ಚಾಲನೆ ದೊರೆತಿದೆ ಎನ್ನಲಾಗಿದೆ.    

Recent Articles

spot_img

Related Stories

Share via
Copy link