ಚಂಡೀಗಡ:
ಭಾರತ ಮತ್ತು ಪಾಕ್ ಗಡಿಯ ಭಾರತೀಯ ಭೂಪ್ರದೇಶವಾದ ಫಿರೋಜ್‌ಪುರದಲ್ಲಿ ಸೋಮವಾರ ರಾತ್ರಿ ಪಾಕಿಸ್ತಾನದ ಡ್ರೋನ್ ಪತ್ತೆಯಾಗಿದ್ದು, ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಪಂಜಾಬ್ ಪೊಲೀಸ್ ಮತ್ತು ಇತರ ಭದ್ರತಾ ಪಡೆಗಳು ತುರ್ತು ನಿಗಾ ವಹಿಸಿವೆ ಎಂದು ತಿಳಿದು ಬಂದಿದೆ.
ಗಡಿಭಾಗದಲ್ಲಿ ಈವರೆಗೂ ಐದು ಬಾರಿ ಡ್ರೋನ್ ಹಾರಾಡಿರುವುದು ಪತ್ತೆಯಾಗಿದೆ. ಅದರಲ್ಲಿ ಒಮ್ಮೆ ಡ್ರೋನ್ ಬಾರತೀಯ ಗಡಿಯೊಳಕ್ಕೆ ಪ್ರವೇಶಿಸಿದೆ. ಹುಸೇನಿವಾಲಾ ಬಳಿಯ ಬಸ್ತಿ ರಾಮ್ ಲಾಲ್ ಚೆಕ್ ಪೋಸ್ಟ್ ಪ್ರದೇಶದಲ್ಲಿ ಡ್ರೋನ್ ಪತ್ತೆಯಾಗಿದೆ.ಸೋಮವಾರ ಹಾರಾಟ ನಡೆಸಿರುವುದು ಕಂಡುಬಂದಿದೆ.