ನವದೆಹಲಿ :
ಭಾರತದ ಎಲ್ಲಾ ವರ್ಗದವರಿಗೂ ಅಚ್ಚುಮೆಚ್ಚಿನ ಜನಪ್ರಿಯವಾದ ಮಾರುತಿ ಸುಜುಕಿ ಸ್ವಿಫ್ಟ್ ನ ಹೈಬ್ರಿಡ್ ಮಾದರಿಯನ್ನು ಅನಾವರಣಗೊಳಿಸಿದೆ . ಇದು ಅಂತರರಾಷ್ಟ್ರೀಯವಾಗಿ ಬಿಡುಗಡೆಯಾದ ಸ್ವಿಫ್ಟ್ ಆರ್‍ಎಸ್‍ಗಿಂತ ಸ್ವಲ್ಪ ಭಿನ್ನವಾಗಿದೆ.
ಸದ್ಯ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಸ್ವಿಫ್ಟ್ ಹೈಬ್ರಿಡ್ ಕಾರು ಮೈಲ್ಡ್ ಹೈಬ್ರಿಡ್ ಅವತರಣಿಕರಯಾಗಿದ್ದು ಈಗಾಗಲೆ ಇದು ಜಪಾನ್‍ನಲ್ಲಿ ಭರ್ಜರಿ ಮಾರಾಟವಾಗುತ್ತಿದೆ ಅಲ್ಲದೆ ಈ ಕಾರು ಎಸ್‍ಜಿ ಮತ್ತು ಎಸ್‍ಎಲ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ. ಎಸ್‍ಹೆಚ್‍ವಿಎಸ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನಕ್ಕಿಂತ ಭಿನ್ನವಾಗಿ, ಈ ಮಾದರಿಯು ಫ್ಯೂರ್ ಹೈಬ್ರಿಡ್ ಆಗಿದ್ದು, ಪೆಟ್ರೋಲ್ ಎಂಜಿನ್‍ಗೆ ಸಹಾಯ ಮಾಡುವ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಈ ಕಾರು 3840 ಎಂಎಂ ಉದ್ದ, 1695 ಎಂಎಂ ಅಗಲ ಮತ್ತು 1500 ಎಂಎಂ ಎತ್ತರವನ್ನು ಹೊಂದಿದೆ. ಇನ್ನೂ ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್ ಆವೃತ್ತಿಯು 2450 ಎಂಎಂ ವ್ಹೀಲ್‍ಬೇಸ್ ಅನ್ನು ಹೊಂದಿದೆ.
ಈ ಹೊಸ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 10 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಜನರೇಟ್‍ರ್‍ನೊಂದಿಗೆ ಮುಂಭಾಗದ ಟಯರ್‍ಗಳಿಗೆ ಮಾತ್ರ ಪವರ್ ಅನ್ನು ರವಾನಿಸುತ್ತದೆ. ಗ್ಯಾಸೋಲಿನ್ ಯುನಿಟ್ 89ಬಿಹೆಚ್‍ಪಿ ಪವರ್ ಮತ್ತು 118 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೈಬ್ರಿಡ್ ಎಂಜಿನ್‍ನೊಂದಿಗೆ 5 ಸ್ಪೀಡ್ ಎಎಂಟಿ ಗೇರ್‍ಬಾಕ್ಸ್ ಅನ್ನು ಒಳಗೊಂಡಿದೆ.
ಮಾರುತಿ ಸ್ವಿಫ್ಟ್ ಹೈಬ್ರಿಡ್‍ನಲ್ಲಿ ಸಾಮಾನ್ಯ ಮಾದರಿಗಿಂತ ಕೆಲವು ನವೀಕರಣಗಳನ್ನು ಮಾಡಲಾಗಿದೆ. ಹ್ರೈಬ್ರಿಡ್ ಆವೃತ್ತಿಯು ಕಡಿಮೆ ವೇಗದಲ್ಲಿ ಪೂರ್ಣ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಮೋಡ್‍ನಲ್ಲಿ ಚಲಾಯಿಸಬಹುದಾಗಿದೆ. ಹೊಸ ಮಾರುತಿ ಸುಜುಕಿ ಸ್ವಿಫ್ಟ್ ನಲ್ಲಿ ಹೈಬ್ರಿಡ್ ಬ್ಯಾಡ್ಜ್ ಹೊರತುಪಡಿಸಿದರೆ ಸಾಮಾನ್ಯ ಮಾದರಿಗೆ ಹೋಲುತ್ತದೆ.
ಈ ಕಾರು ಡ್ಯುಯಲ್ ಕ್ಯಾಮೆರಾ ಬ್ರೇಕ್ ಸಪೋರ್ಟ್ ಮತ್ತು ಪ್ಯಾಡಲ್ ಶಿಫ್ಟರ್ ನಂತಹ ಹೊಸ ಫೀಚರ್ಸ್‍ಗಳನ್ನು ಅಳವಡಿಸಲಾಗಿದೆ. ಅಲ್ಲದೇ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಫೀಚರ್ಸ್‍ಗಳನ್ನು ಅಳವಡಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಹ್ಯಾಚ್‍ಬ್ಯಾಕ್ 1.2 ಲೀಟರ್ ಕೆ ಸೀರಿಸ್ ಪೆಟ್ರೋಲ್ ಮತ್ತು 1.3 ಲೀಟರ್ ಎಂಜೆಡಿ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಈ ಸ್ವಿಫ್ಟ್ ಹೈಬ್ರಿಡ್ ಕಾರನ್ನು ಬಿಡುಗಡೆಗೊಳಿಸುವಾಗ ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ಅಭಿವೃದ್ದಿಪಡಿಸಲಾಗುವುದು ಎಂದು ಕಂಪನಿ ತಿಳಿಸಿದೆ .
