ಜೆಟ್ ಏರ್‌ವೇಸ್‌ ಗೆ ENERGY ನೀಡಲು ಮುಂದಾದ ಸಿನರ್ಜಿ ಗ್ರೂಪ್..!

ನವದೆಹಲಿ:
   ಸದ್ಯ ನಷ್ಟದಲ್ಲಿರುವ ವಿಮಾನಯಾನ ಉದ್ಯಮವನ್ನು ಮೇಲೆತ್ತಲು ಅಯಾ ಕಂಪನಿ ಮಾಲಿಕರು ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ಮೊಟ್ಟಮೊದಲು ಆರ್ಥಿಕ ಸಂಕಷ್ಟಕ್ಕೆ ಎದುರಿಸಿದ ವಿಮಾನಯಾನ ಸಂಸ್ಥೆಯಾದ ಜೆಟ್ ಏರ್‌ವೇಸ್‌ ಗೆ ಹೊಸ ಪಾಲುದಾರರಾಗಲು ಅಮೇರಿಕ ಮೂಲದ ಕಂಪನಿಯಾದ  ಸಿನರ್ಜಿ ಗ್ರೂಪ್ ಕಾರ್ಪ್ ಮುಂದೆ ಬಂದಿದೆ. ದಕ್ಷಿಣ ಅಮೆರಿಕನ್ ಗ್ರೂಪ್ ಆದ ಸಿನರ್ಜಿ ಕೇವಲ ಜೆಟ್ ಏರ್ ವೇಸ್ ನ ಸ್ವತ್ತುಗಳ ಪಾಲುದಾರಿಕೆ/ ಖರೀದಿಗೆ ಮಾತ್ರ ಹೆಚ್ಚು ಆಸಕ್ತಿ ವಹಿಸಬಹುದು ಎಂದು ಉದ್ಯಮ ವೀಕ್ಷಕರು ವಿಶ್ಲೇಷಿಸಿದ್ದಾರೆ
     ಸಿನರ್ಜಿ ಸ್ವತಹ ಕೆಲ ಆರ್ಥಿಕ ಸಂಕಷ್ಟಗಳಲ್ಲಿ ಇದ್ದು ಅದನ್ನು ಲೆಕ್ಕಿಸದೇ ಭಾರತದಲ್ಲಿ ಹೂಡಿಕೆ ಯೋಚನೆ ಮಾಡಿರುವುದು ಸ್ವಾಗತಾರ್ಹ ಎಂದಿದ್ದಾರೆ ಇನ್ನು ಇದರ ಆಗುಹೋಗುಗಳನ್ನು ಚರ್ಚಿಸಲು ಇಂದು ಜೆಟ್ ಏರ್ವೇಸ್ ಗೆ ಸಾಲ ನೀಡಿದ್ದ ಬ್ಯಾಂಕುಗಳು , ಕಂಪನಿಗಳು ಕುಳಿತು ಮುಂದಿನ ಕ್ರಮಗಳ ಬಗ್ಗೆ  ಚರ್ಚಿಸಲಿದ್ದಾರೆ.
   ಈಗ ಸದ್ಯ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ಏರ್ ವೇಸ್ ನ ವಿಮಾನಗಳ ಕಾರ್ಯಾಚರಣೆ ಹಾಗು ನಿರ್ವಹಣಾ ವೆಚ್ಚಗಳನ್ನು ಪೂರೈಸಲು ಹೆಚ್ಚಿನ ಹಣವನ್ನು ಬಿಡುಗಡೆ ಮಾಡುವ ಬಗ್ಗೆಯೂ ಅವರು ಚರ್ಚಿಸಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.ಕೊಲಂಬಿಯಾದ ಕಾರ್ಗೋ ಟ್ರಾನ್ಸ್ ಪೋರ್ಟ್ ಕಂಪನಿಯಾದ ಏವಿಯಾಂಕಾ ಹೋಲ್ಡಿಂಗ್ಸ್ ಮಾಲೀಕರಾದ ಸಿನರ್ಜಿ ಗ್ರೂಪ್ ನವರು  ಹೊಸ ಹೂಡಿ ಮಾಡಲು ಆಸಕ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ.
   ಉದ್ಯಮದ ಮೂಲಗಳಿಂದ ಧೃಡಪಟ್ಟಿರುವುದೇನೆಂದರೆ ವಿಮಾನಯಾನ ಅಭಿವೃದ್ಧಿಗಾಗಿ ಏವಿಯಾಂಕಾ ಸ್ವತಃ ಹಣಕಾಸಿನ ಸವಾಲುಗಳನ್ನು ಎದುರಿಸುತ್ತಿದ್ದರೂ ಸಹ ಜೆಟ್‌ನಲ್ಲಿನ ಆಸಕ್ತಿಯು ವಿಮಾನ ಮತ್ತು ವಿಮಾನ ನಿಲ್ದಾಣ ಸ್ಲಾಟ್‌ಗಳಂತಹ ಸ್ವತ್ತುಗಳಿಗೆ ಸೀಮಿತವಾಗಿರಬಹುದು ಎಂದು ಅವರು ಹೇಳಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap