ಹೈದರಾಬಾದ್
ತೆಲಂಗಾಣ ಸರ್ಕಾರವು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕ್ರಮೇಣವಾಗಿ ಕಾಗದ ರಹಿತ ಇ- ಆಡಳಿತವನ್ನು ಜಾರಿಗೊಳಿಸಲು ನಿರ್ಧರಿಸಿದೆ.
2014 ರಲ್ಲಿ ತೆಲಂಗಾಣ ರಾಜ್ಯ ಮರು ವಿಂಗಡಣೆ ನಂತರ ಸರ್ಕಾರದ ನೀತಿ ಮತ್ತು ಕ್ರಮಗಳ ಅನ್ವಯ ಇಲಾಖೆ ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಮುಂದಾಗಿದೆ.ಇದು ಗಣಿ ನಿಯಂತ್ರಣ ಅಕ್ರಮ ಗಳನ್ನು ತಡೆಗಟ್ಟಲು ಸಹಕಾರಿಯಾಗಿದ್ದು, ಇದರಿಂದಾಗಿ ರಾಜ್ಯದಲ್ಲಿ ಸಮರ್ಥ, ಪಾರದರ್ಶಕ, ಮತ್ತು ವಾಣಿಜ್ಯೋದ್ಯಮ ಮತ್ತು ಸ್ನೇಹಮಯ ಆಡಳಿತ ನಡೆಸಲು ಅನುಕೂಲವಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಸಚಿವ ಕೆ.ಟಿ ರಾಮ ರಾವ್ 2018 ಜುಲೈ 11 ರಂದು ಆನ್ ಲೈನ್ ಅಪ್ಲಿಕೇಶನ್ ಗಳನ್ನು ಉದ್ಘಾಟಿಸಿದ್ದರು. ಇದರಿಂದೀಚೆಗೆ ಇಲಾಖೆ ಕ್ರಮೇಣ ಕಾಗದರಹಿತ ಆಡಳಿತ ನಡೆಸಲು ಮಂದಾಗಿದೆ. ಈಗ ಇಲಾಖೆಯ ಐಟಿ ವಿಭಾಗವು ಬಳಕೆದಾರರು, ವಾಣಿಜ್ಯೋದ್ಯಮಿಗಳು ಹಾಗೂ ಪಾಲುದಾರರಿಗೆ ಅನುಕೂಲ ಮಾಡಿಕೊಡಲು ಒಎಮ್ ಡಿಟಿಎಸ್ ಮತ್ತು ಒಟಿಪಿ ಇ ಮಾದರಿಗಳನ್ನು ಅಭಿವೃದ್ಧಿಪಡಿಸಿದೆ.