ಯಸ್ ಬ್ಯಾಂಕ್ ಪುನರುಜ್ಜೀವನಕ್ಕೆ ಕರಡು ಯೋಜನೆ ಸಿದ್ಧ : ರಜನೀಶ್ ಕುಮಾರ್

ಮುಂಬೈ

   ಭಾರತದಲ್ಲಿ ಸುಲಲಿತ ಆನ್ ಲೈನ್ ಪಾವತಿ ಕೇಂದ್ರ ಎಂದೇ ಹೆಸರಾಗಿದ್ದ ಪೋನ್  ಪೇ ಯ ಬ್ಯಾಂಕಿಂಗ್ ಪಾಲುದಾರ ಸಂಸ್ಥೆ ಯೆಸ್ ಬ್ಯಾಂಕ್ ಸೂಪರ್ ಸೀಡ್ ಆದ ಪರಿಣಾಮ ಭಾರತದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು ಇದನ್ನು ತಡೆಯಲೆಂದು ಯಸ್ ಬ್ಯಾಂಕ್ ಪುನರುಜ್ಜೀವನಕ್ಕೆ ಕರಡು ಯೋಜನೆ ಸಿದ್ಧ ಮಾಡಲಾಗಿದೆ  ಅದನ್ನು ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಹೂಡಿಕೆ ಮತ್ತು ಕಾನೂನು ತಜ್ಞರು ಪರಿಶೀಲಿಸುತ್ತಿದ್ದಾರೆಂದು ಎಸ್’ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಅವರು ಶನಿವಾರ ಹೇಳಿದ್ದಾರೆ. 

    ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯೆಸ್ ಬ್ಯಾಂಕ್ ಕಾಯಕಲ್ಪಕ್ಕೆ ಶೀಘ್ರದಲ್ಲಿಯೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಬ್ಯಾಂಕ್’ನ ಪುನರುಜ್ಜೀವನಕ್ಕೆ ಕರಡು ಯೋಜನೆ ಈಗಾಗಲೇ ಸಿದ್ಧವಾಗಿದ್ದು, ಅದನ್ನು ಎಸ್’ಬಿಐ ಹೂಡಿಕೆ ಮತ್ತು ಕಾನೂನು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆಂದು ಹೇಳಿದ್ದಾರೆ. 

    ಕರಡು ಯೋಜನೆ ಪರಿಶೀಲನೆ ಬಳಿಕ ಯೆಸ್ ಬ್ಯಾಂಕ್ ನಲ್ಲಿ ಹೂಡಿಕೆಗೆ ಸಿದ್ಧವಿರಲಿದೆ. ಯೆಸ್ ಬ್ಯಾಂಕ್ ಷೇರುದಾರರ ಹಿತ ಕಾಪಾಡಲು ಎಸ್’ಬಿಐ ಬದ್ಧವಾಗಿದೆ. ಯೆಸ್ ಬ್ಯಾಂಕ್ ಸಿಬ್ಬಂದಿಯ ವೃತ್ತಿಪರತೆ ಬ್ಯಾಂಕಿಂಗ್ ವಲಯದಲ್ಲಿ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಅವರಿಗೆ ಒಂದು ವರ್ಷದ ಉದ್ಯೋಗ ಭದ್ರತೆಯನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. 

    ನಿನ್ನೆಯಷ್ಟೇ ಆರ್’ಬಿಐ ಯೆಸ್ ಬ್ಯಾಂಕ್’ನ ಪುನರುಜ್ಜೀವನಕ್ಕೆ ಕರಡು ಯೋಜನೆ ಪ್ರಕಚಿಸಿತ್ತು. ಇದೀಗ ದೇಶದ ಪ್ರಮುಖ ಬ್ಯಾಂಕ್ ವೊಂದು ಯೆಸ್ ಬ್ಯಾಂಕ್’ನ ಶೇ.49ರಷ್ಟು ಷೇರುಗಳನ್ನು ಖರೀದಿ ಮಾಡಲಿದೆ. ಬಂಡವಾಳ ಹೂಡಿಕೆಯ ನಂತರದ ಮೂರು ವರ್ಷಗಳ ಅವಧಿಯಲ್ಲಿ ಹೂಡಿಕೆಯನ್ನು ಶೇ.26ಕ್ಕಿಂತಲೂ ಕಡಿಮೆಯಾಗಲು ಅವಕಾಶವಿಲ್ಲ ಎಂದು ಆರ್’ಬಿಐ ತಿಳಿಸಿತ್ತು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap