ಪ್ರಶಾಂತ್‌ ಭೂಷಣ್‌ ನ್ಯಾಯಾಂಗ ನಿಂದನೆ ಪ್ರಕರಣ : ಅ.12ಕ್ಕೆ ಮುಂದೂಡಿಕೆ

ನವದೆಹಲಿ:

     ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರ ವಿರುದ್ಧದ 2009ರಲ್ಲಿ ನಡೆದಿದ್ದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಅ.12ಕ್ಕೆ ಮುಂದೂಡಿದ್ದು ಪ್ರಕರಣದ ಇಥ್ಯರ್ಥಕ್ಕೆ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರ ಸಹಾಯ ಕೇಳಿದೆ ಎನ್ನಲಾಗಿದೆ. 

     2009ರಲ್ಲಿ ನಿಯತಕಾಲಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಲ ಹಾಲಿ ಹಾಗೂ ಮಾಜಿ ಉನ್ನತ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಭ್ರಷ್ಟಚಾರದ ಆರೋಪ ಮಾಡಿದ ಕಾರಣಕ್ಕೆ ಅಂದು ಸುಪ್ರೀಂ ಕೋರ್ಟ್ ನಿಯತಕಾಲಿಕೆಯ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ಹಾಗೂ ಪ್ರಶಾಂತ್ ಭೂಷಣ್ ಅವರ ವಿರುದ್ಧ ನ್ಯಾಯಾಂಗ ನಿಂದನೆ ನೋಟೀಸ್ ಜಜಾರಿ ಮಾಡಿತ್ತು.

     ಒಬ್ಬ ವ್ಯಕ್ತಿಯು ನ್ಯಾಯಾಂಗದ ವಿರುದ್ಧ ಯಾವಾಗ ಆರೋಪಗಳನ್ನು ಎತ್ತಬಹುದು ಅಥವಾ ಅವನಿಗೆ ಮಾದ್ಯಮಗಳೆದುರು ಹೋಗಲು ಅನುಮತಿ ಇದೆಯೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ ಅನೇಕ ವಿಧದಲ್ಲಿ ಪರಿಶೀಲನೆ ನಡೆಸುತ್ತಿದೆ. ನ್ಯಾಯಾಲಯವು ಅಕ್ಟೋಬರ್ 12 ರಂದು ಮತ್ತೆ ಈ ವಿಷಯವನ್ನು ಕೈಗೆತ್ತಿಕೊಳ್ಳಲಿದೆ ಎಂದು ಸುಪ್ರೀಂ ಕೋರ್ಟ್ ನ ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap