ಗುಜರಾತ್ : 58ಕ್ಕೆ ಏರಿಕೆಯಾದ ಕೊರೋನಾ ಸಾವಿನ ಸಂಖ್ಯೆ..!

ಗುಜರಾತ್:

   ಮಹಾ ಮಾರಿ ಕೊರೋನಾಗೆ ರಾಜ್ಯದಲ್ಲಿ ಮತ್ತೆ ಐವರು ಮೃತಪಟ್ಟಿದ್ದು ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಇದುವರೆಗೆ ಮೃತಪಟ್ಟವರ ಸಂಖ್ಯೆ 58ಕ್ಕೇರಿದೆ ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ ಎಂದು ತಿಳಿದು ಬಂದಿದೆ.

   ಗುಜರಾತ್ ನಲ್ಲಿ ಇಂದು ಮೃತಪಟ್ಟ ಐವರಲ್ಲಿ ನಾಲ್ವರು ಅಹಮದಾಬಾದ್ ನವರಾಗಿದ್ದು ಒಬ್ಬರು ಸೂರತ್ ನವರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಯಂತಿ ರವಿ ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ನಾಲ್ವರು ಸಕ್ಕರೆ ಕಾಯಿಲೆ, ಮೂತ್ರಪಿಂಡ ವೈಫಲ್ಯ, ಅಧಿಕ ಒತ್ತಡಗಳಿಂದ ಬಳಲುತ್ತಿದ್ದರು. ಗುಜರಾತ್ ನಲ್ಲಿ 228 ಹೊಸ ಪ್ರಕರಣಗಳು ವರದಿಯಾಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸಾವಿರದ 604ಕ್ಕೇರಿದೆ.ಇನ್ನು ಭಾರತದಲ್ಲಿ ಕೊರೋನಾ ಸಾವುಗಳ ಪ್ರಮಾಣ ಶೇಕಡಾ 3.23ರಷ್ಟಿದೆ. 

     ಜಾರ್ಖಂಡ್ ನಲ್ಲಿ ಖಾಸಗಿ ಆಸ್ಪತ್ರೆಯನ್ನು ಸೀಲ್ ಮಾಡಿ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ನಿವೃತ್ತ ಡಿಡಿಸಿಗೆ ಕೊರೋನಾ ಸೋಂಕು ಗುರುಗ್ರಾಮ್ ನ ಖಾಸಗಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿತ್ತು. ಅವರು ವಾಸಿಸುತ್ತಿರುವ ಅಪಾರ್ಟ್ ಮೆಂಟ್ ನ್ನು ಸಹ ಸೀಲ್ ಮಾಡಲಾಗಿದೆ ಎಂದು ರಾಂಚಿ ಜಿಲ್ಲಾಡಳಿತ ಹೇಳಿದೆ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap