ನವದೆಹಲಿ
ಭಾರತವು ಭೀಕರ ಆರ್ಥಿಕ ಬಿಕ್ಕಟ್ಟು, ಭೀಕರ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದೆ ಮತ್ತು ಈಗ, ಚೀನಾದ ಗಡಿಯಲ್ಲಿ ಕೂಡ ಬಿಕ್ಕಟ್ಟು ಉಂಟಾಗಿದೆ. ಈ ಎಲ್ಲಾ ಬಿಕ್ಕಟ್ಟು, ವಿಷಮ ಪರಿಸ್ಥಿತಿಗಳಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ತಪ್ಪು ನಿರ್ಧಾರಗಳು, ತೀರ್ಮಾನಗಳೇ ಕಾರಣ. ಕೇಂದ್ರ ಸರ್ಕಾರ ಅನುಸರಿಸುತ್ತಿರುವ ನೀತಿಗಳು ಕಾರಣವೆಂದು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಚೀನಾದ ಗಡಿಯಲ್ಲಿನ ಪರಿಸ್ಥಿತಿ ಮತ್ತು ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಬಗ್ಗೆ ಚರ್ಚಿಸಲು ಪಕ್ಷವು ಕರೆದಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಅವರು ಮಾತನಾಡಿದರು.
“ಈ ಪರುಸ್ಥಿತಿ ದೇಶದ ಸುರಕ್ಷತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ವ್ಯಾಪಕವಾದ ಕಂಟಕ ಹಾಗೂ ದುಃಸ್ವಪ್ನವಾಗಿದೆ” ಎಂದು ಅವರು ಹೇಳಿದರು.ಚೀನಾದೊಂದಿಗಿನ ಎಲ್‌ಎಸಿಯಲ್ಲಿ ನಮಗೆ ಬಿಕ್ಕಟ್ಟು ಇದೆ. ನಿರಾಕರಿಸಲಾಗದ ಸಾಂಗತಿ ಎಂದರೆ 2020 ರ ಏಪ್ರಿಲ್-ಮೇ ತಿಂಗಳಿನಿಂದ ಇಲ್ಲಿಯವರೆಗೆ, ಚೀನಾದ ಸೈನಿಕರು ಪಾಂಗೊಂಗ್ ತ್ಸೊ ಸರೋವರ ಪ್ರದೇಶ ಹಾಗೂ ಗಾಲ್ವಾನ್ ಕಣಿವೆಯಲ್ಲಿರುವ ನಮ್ಮ ಭೂಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿದ್ದಾರೆ ಆದರೆ ಸರ್ಕಾರ ಇದನ್ನು ನಿರಾಕರಿಸುತ್ತಿದೆ.
“ಒಳನುಗ್ಗುವಿಕೆ ಖಚಿತವಾಗಿದ್ದು ಮೇ 5, 2020 ರಂದು ಅದು ವರದಿಯಾಗಿದೆ. ಆದರೆ ಶಾಂತಿಯ ನಿರ್ಣಯದ ಬದಲು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಜೂನ್ 15-16 ರಂದು ಹಿಂಸಾತ್ಮಕ ಘರ್ಷಣೆಗಳು ನಡೆದವು. ಇಪ್ಪತ್ತು ಭಾರತೀಯ ಸೈನಿಕರು ಹುತಾತ್ಮರಾದರು,ರು, 85 ಮಂದಿ ಗಾಯಗೊಂಡರು ಮತ್ತು 10 ಮಂದಿ ‘ಕಾಣೆಯಾಗಿದ್ದಾರೆ’ ಲಡಾಖ್ ನಲ್ಲಿ ಭಾರತೀಯ ಭೂಪ್ರದೇಶಕ್ಕೆ ಯಾರೂ ಅಕ್ರಮವಾಗಿ ನುಗ್ಗಿಲ್ಲ ಎಂದು ಪ್ರಧಾನಿ ಹೇಳಿದಾಗ ಅವರನ್ನು ಪ್ರಶ್ನಿಸಲಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಯ ವಿಷಯಗಳಲ್ಲಿ, ರಾಷ್ಟ್ರವು ಯಾವಾಗಲೂ ಒಟ್ಟಾಗಿ ನಿಂತಿದೆ ಮತ್ತು ಈ ಬಾರಿಯೂ ಸಹ ಹಾಗೆಯೇ ಆಗುವುದು” ಸೋನಿಯಾ ಹೇಳೀದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ