ಅಧಿಕಾರಕ್ಕಾಗಿ ಶಾಸಕರ ಸಹಿ ದುರುಪಯೋಗ : ನವಾಬ್ ಮಲ್ಲಿಕ್

ಮುಂಬೈ:

    ಮಹಾರಾಷ್ಟ್ರದಲ್ಲಿ ನಡೆದಿರುವ ಅಚ್ಚರಿಯ ಸರ್ಕಾರ ರಚನೆ ಕಂಡು ಕ್ಷಣಕಾಲ ದಂಗಾಗಿರುವ ಶರದ್ ಪವಾರ್ ಇದು ಅಪವಿತ್ರ ಮೈತ್ರಿ ಎಂದು ಹೇಳಿದ್ದಾರೆ ಅಲ್ಲದೆ ನಮ್ಮ ಪಕ್ಷದ ನಾಯಕರನ್ನು ಹೈಜಾಕ್ ಮಾಡಿ ಸರ್ಕಾರ ರಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಇದರ ಬೆನ್ನಲೆ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಅವರ ವಾಟ್ಸಾಪ್ ಸ್ಟೇಟಸ್ ನ್ನು ನೋಡುವುದಾದರೆ ಪವಾರ್ ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ ವಾಟ್ಸಾಪ್ ಸ್ಟೇಟಸ್ ಪ್ರಕಾರ ಪವಾರ್ ಕುಟುಂಬದಲ್ಲಿ ಬಿರುಕು ಉಂಟಾಗಿದ್ದು ಅಜಿತ್ ಪವಾರ್ ನಿಂದಾಗಿ ಕುಟುಂಬ ಒಡೆಯುವ ಹಂತದಲ್ಲಿದೆ ಎಂದು ಹೇಳಿಕೊಂಡಿದ್ದಾರೆ.

   ಈ ವಿಷಯವಾಗಿ ಅವರನ್ನು ಸಂಪರ್ಕಕಿಸಿದಾಗ ಸುಪ್ರಿಯಾ ಸುಳೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಮೂರೂ ಪಕ್ಷಗಳ ಸುದ್ದಿಗೋಷ್ಠಿ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಸುಪ್ರಿಯಾ ಅವರ ಮತ್ತೊಂದು ವಾಟ್ಸಾಪ್ ನಲ್ಲಿ, ಜೀವನದಲ್ಲಿ ಯಾರನ್ನು ನೀವು ನಂಬುತ್ತೀರಿ?, ಇಷ್ಟು ಮೋಸ ಇದುವರೆಗೆ ಆಗಿಲ್ಲ, ಅವರನ್ನು ಬೆಂಬಲಿಸಿದೆವು, ಪ್ರೀತಿಸಿದೆವು, ಅದಕ್ಕೆ ಹಿಂತಿರುಗಿ ಏನು ಸಿಕ್ಕಿದೆ ನೋಡಿ ಎಂದಿದ್ದಾರೆ .

    ಪಕ್ಷದ ವರಿಷ್ಠರಾದ ಶರದ್ ಪವಾರ್ ಅವರು ಇಂದು ಸಂಜೆ 4.30ಕ್ಕೆ ಎನ್ ಸಿಪಿ ಶಾಸಕರ ಸಭೆ ಕರೆದಿದ್ದು ಪಕ್ಷದ ಮುಂದಿನ ನಡೆಯ ಬಗ್ಗೆ ನಿರ್ಧಾರ ಮಾಡುತ್ತಾರೆ ಎನ್ನಲಾಗಿದೆ. ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸಂದರ್ಭದಲ್ಲಿಸರ್ಕಾರಕ್ಕೆ ಬೆಂಬಲ ಸೂಚಿಸಿದ ಶಾಸಕರ ಹೆಸರುಗಳನ್ನು ಹಾಜರಾತಿ ಪಟ್ಟಿಯಿಂದ ತೆಗೆದುಕೊಳ್ಳಲಾಗಿದ್ದು , ಪ್ರಮಾಣವಚನಕ್ಕೆ ಅದನ್ನು ದುರುಪ ಯೋಗ ಪಡಿಸಿಕೊಳ್ಳಲಾಗಿದೆ ಎಂದು ನವಾಬ್ ಅವರು ದೂರಿದ್ದಾರೆ.ಸದ್ಯ ರಚನೆಯಾಗಿರುವ ಸರ್ಕಾರಕ್ಕೆ ಅಗತ್ಯ ಶಾಸಕರ ಬೆಂಬಲ ಇದ್ದು ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.ಇತ್ತ ಶರದ್ ಪವಾರ್ ಅವರು ಅಜಿತ್ ಅವರನ್ನು ಪಕ್ಷದಿಂದ ವಜಾ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap