ನವದೆಹಲಿ:
ಒಂದೆಡೆ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಸಚಿನ್ ಪೈಲಟ್ ಮತ್ತು ಇತರ ಕೆಲ ಶಾಸಕರನ್ನು ಅವರ ಸ್ಥಾನದಿಂದ ಉಚ್ಚಾಟನೆ ಮಾಡಲಾಗಿದೆ. ಇದರ ಮಧ್ಯೆ ಪಕ್ಷಾಂತರವಾಗುವ ನಾಯಕರನ್ನು 5 ವರ್ಷ ಸಾರ್ವಜನಿಕ ಹುದ್ದೆಯಿಂದ ನಿಷೇಧಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಪಿಲ್ ಸಿಬಲ್ , ‘ಪಕ್ಷಾಂತರಿಗಳು ಮುಂದಿನ ಐದು ವರ್ಷಗಳ ಕಾಲ ಯಾವುದೇ ಸಾರ್ವಜನಿಕ ಹುದ್ದೆ ಪಡೆಯದಂತೆ ಮತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದರ ಮೇಲೆ ನಿಷೇಧ ಹೇರಬೇಕು ಎಂದು ಹೇಳಿದ್ದಾರೆ.
ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಅವರು, ‘ಜನರಿಂದ ಆಯ್ಕೆಯಾದ ಸರ್ಕಾರವನ್ನು ಕೆಡವುವಂಥ ವೈರಸ್ ದೆಹಲಿಯಲ್ಲಿದೆ. ಇದು ವುಹಾನ್ ವೈರಸ್‌ನಷ್ಟೇ ಅಪಾಯಕಾರಿ. ಇದಕ್ಕಿರುವ ಪ್ರತಿಕಾಯಗಳೆಂದರೆ ಸಂವಿಧಾನದ ಹತ್ತನೇ ವಿಧಿಗೆ ತಿದ್ದುಪಡಿ ಮಾಡುವುದಾಗಿದೆ. ಪಕ್ಷಾಂತರ ನಿಷೇಧ ಕಾನೂನಿಗೆ ತಿದ್ದುಪಡಿ ತಂದು, ಪಕ್ಷಾಂತರಿಗಳು ಐದು ವರ್ಷಗಳ ಕಾಲ ಯಾವುದೇ ಹುದ್ದೆ ಹೊಂದುವುದು ಹಾಗೂ ಮುಂದಿನ ಚುನಾವಣೆ ಎದುರಿಸುವುದನ್ನು ತಡೆಯಬೇಕು ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
