ಅಟಲ್ ಟನಲ್ :ಅಡಿಗಲ್ಲು ಹಾಕಿದವರ ಹೆಸರಿದ್ದ ನಾಮಫಲಕ ನಾಪತ್ತೆ..!

ಚಂಡೀಗಢ:

     ರೋಹ್ಟಂಗ್‌ನ ಅಟಲ್‌ ಸುರಂಗದಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಹೆಸರಿದ್ದ ಫಲಕವನ್ನು ಕಿತ್ತು ಹಾಕಲಾಗಿದ್ದು, ಇದರಿಂದ ಸಿಡಿಮಿಡಿಗೊಂಡಿರುವ ಹಿಮಾಚಲ ಪ್ರದೇಶ ಕಾಂಗ್ರೆಸ್‌ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದೆ.

    ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶದ ರೋಹ್ಟಂಗ್‌ನಲ್ಲಿರುವ ಅಟಲ್‌ ಸುರಂಗವನ್ನು ಲೋಕಾರ್ಪಣೆಗೊಳಿಸಿದ್ದರು.

    ಯುಪಿಎ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು 2010ರ ಜೂನ್‌ 28ರಂದು ಈ ಅಟಲ್‌ ಸುರಂಗಕ್ಕೆ ಅಡಿಗಲ್ಲು ಹಾಕಿದ್ದರು. ಈ ವೇಳೆ ಶಂಕು ಸ್ಥಾಪನೆಯ ದಿನ ಸೋನಿಯಾ ಗಾಂಧಿ ಸೇರಿದಂತೆ ಯುಪಿಎ ಸರ್ಕಾರದ ಪ್ರಮುಖ ನಾಯಕರ ಅಡಿಗಲ್ಲು ಹಾಕುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾಯಕರ ಹೆಸರಿನ ಫಲಕವನ್ನು ಹಾಕಲಾಗಿತ್ತು. ಆದರೆ ಅಕ್ಟೋಬರ್‌ 3ರ ಅಟಲ್‌ ಟನಲ್‌ ಉದ್ಘಾಟನೆಗೂ ಮುನ್ನ ಸೋನಿಯಾ ಗಾಂಧಿ ಹೆಸರಿದ್ದ ಫಲಕವನ್ನು ಕಿತ್ತು ಹಾಕಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.
      ಈ ಸಂಬಂಧ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿರುವ ಹಿಮಾಚಲ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕುಲ್‌ದೀಪ್‌ ಸಿಂಗ್‌ ರಾಥೋಡ್, ಆ ಜಾಗದಲ್ಲಿ ಫಲಕ ಕಾಣೆಯಾಗಿದೆ ಎಂದು ತಿಳದಾಗ ನನಗೆ ಆಶ್ಚರ್ಯವಾಯಿತು. ಹದಿನೈದು ದಿನದ ಒಳಗೆ ಫಲಕವಿದ್ದ ಜಾಗದಲ್ಲಿ ಮತ್ತೆ ಅದನ್ನು ಹಾಕಲು ಸರ್ಕಾರ ವಿಫಲವಾದರೆ ನಾವು ರಾಜ್ಯವ್ಯಾಪಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap