ನವದೆಹಲಿ
ಭಾರತದ ಪ್ರಮುಖ ಪೆಟ್ರೋಲ್ ಸಂಸ್ಕರಣಾ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗೆ ಸೇರಿದ ಆಯಿಲ್ ಟ್ಯಾಂಕರ್ ಶ್ರೀಲಂಕಾದ ಪೂರ್ವ ಕರಾವಳಿಯಲ್ಲಿ ಬೆಂಕಿಗೆ ಆಹುತಿಯಾಗಿದೆ, ಅಲ್ಲಿ ರಕ್ಷಣಾ ಕಾರ್ಯಕ್ಕೆ ಸಹಾಯ ಮಾಡಲು ವಿಮಾನ ಮತ್ತು ಎರಡು ನೌಕಾಪಡೆಯ ಹಡಗುಗಳನ್ನು ನಿಯೋಜಿಸಲಾಗಿದೆ ಎಂದು ನೌಕಾಪಡೆಯ ಪ್ರತಿನಿಧಿ ಕಮಾಂಡರ್ ರಂಜಿತ್ ರಾಜಪಕ್ಸೆ ತಿಳಿಸಿದದ್ದಾರೆ.
ಸಂಪೂರ್ಣ ಲೋಡ್ ಮಾಡಲಾದ ನ್ಯೂ ಡೈಮಂಡ್, ಬಹಳ ದೊಡ್ಡ ಕಚ್ಚಾ ತೈಲ ವಾಹಕ ಹಡಗಾಗಿದ್ದು ಭಾರತದ ಪ್ಯಾರಡಿಪ್ ಬಂದರಿಗೆ ಹೋಗುತ್ತಿತ್ತು ಎನ್ನಲಾಗಿದೆ.ಇದು ಕುವೈತ್‌ನ ಮಿನಾ ಅಲ್ ಅಹ್ಮಾದಿಯಿಂದ ಪ್ರಯಾಣ ಮಾಡಿತ್ತು ಎಂದು ವರದಿಯಲ್ಲಿ ತಿಳಿದು ಬಂದಿದೆ
ಶ್ರೀಲಂಕಾದ ಪೂರ್ವ ಕರಾವಳಿಯಿಂದ ಈ ಹಡಗು ಸುಮಾರು 20 ನಾಟಿಕಲ್ ಮೈಲುಗಳಷ್ಟು ದೂರದಲ್ಲಿತ್ತು ಎನ್ನಲಾಗಿದೆ. ಅಗ್ನಿ ಆಕಸ್ಮಿಕ ಹಡಗು ಕೊಲಂಬೊದಿಂದ ಹೊರಗಿದೆ ಎಂದು ಮೂಲಗಳು ಈ ಹಿಂದೆ ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ