ನವದೆಹಲಿ:
ಸದ್ಯ ದೇಶದಲ್ಲಿ ಎದುರಾಗಿರುವ ಆರ್ಥಿಕ ಹಿಂಜರಿತವನ್ನು ಸರಿದೂಗಿಸಲು ಕಂಪನಿಗಳು ಬೇರೆ ವಿಧಿಯಿಲ್ಲದೆ ಕಾರ್ಮಿಕರನ್ನು ತೆಗೆದು ಹಾಕುವ ಯೋಚನೆ ಮಾಡುತ್ತಿದ್ದು ಇದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬರುತ್ತವೆ ಆದರೆ ಈ ವಿಪತ್ತನ್ನು ತಪ್ಪಿಸಲು ಕಾರ್ಮಿಕರಿಗೆ ತಮ್ಮ ಕೌಶಲ್ಯ ವೃದ್ಧಿಸಸಿಕೊಳ್ಳಲು ಸರ್ಕಾರ ಕೌಶಲ್ಯಾಭಿವೃದ್ಧಿಯ ಕುರಿತಂತೆ ಕಾಲ ಕಾಲಕ್ಕೆ ಅರಿವು ಮೂಡಿಸುವ ಕಾರ್ಯ ಮಾಡುತ್ತಲೇ ಬಂದಿದೆ ಎಂದು ಕಾರ್ಮಿಕ ಸಚಿವರು ತಿಳಿಸಿದ್ದಾರೆ.
ಉತ್ತರ ಭಾರತ ಜನರ ಕೌಶಲ್ಯ ಕುರಿತಂತೆ ಹೇಳಿಕೆ ನೀಡಿ ಕಾರ್ಮಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕಾರ್ಮಿಕ ಖಾತೆ ಸಚಿವ ಸಂತೋಷ್ ಗಂಗ್ವಾರ್ ಅವರು ಇಂದು ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ.
ನಾನು ಹೇಳಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಜನರಲ್ಲಿ ಕೌಶಲ್ಯಗಳ ಕೊರತೆ ಎದುರಾಗಿದ್ದು, ಇದನ್ನು ನಿವಾರಿಸುವ ಸಲುವಾಗಿ ಸರ್ಕಾರ ಕೌಶಲ್ಯ ಅಭಿವೃದ್ಧಿ ಸಚಿವಾಲಯವನ್ನು ರಚಿಸಿದೆ. ಇದರಿಂದ ಮಕ್ಕಳಿಗೆ ಅಗತ್ಯವಿರುವ ಉದ್ಯೋಗಕ್ಕೆ ತಕ್ಕಂತೆ ತರಬೇತಿಯನ್ನು ನೀಡಲಾಗುತ್ತದೆ ಎಂದು ನಾನು ಹೇಳಿದ್ದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿವ ಸಂತೋಷ್ ಅವರು, ದೇಶದಲ್ಲಿ ಬಹಳ ಉದ್ಯೋಗಾವಕಾಶಗಳಿಗೇನು ತೊಂದರೆಯಿಲ್ಲ ಆದರೆ ಜನರಿಗೆ ಅದರಲ್ಲೂ ಉತ್ತರ ಭಾರತದ ಮಂದಿಗೆ ಕೌಶಲ್ಯದ ಕೊರತೆ ಇದೆ ಅದನ್ನು ಮೆಟ್ಟಿ ನಿಂತರೆ ಎಲ್ಲವೂ ಸಾಧ್ಯ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ