ಸದ್ಯ ಪ್ರಜಾ ಪ್ರಭುತ್ವಕ್ಕೆ ಹೊಸ ಸವಾಲು ಎದುರಾಗಿದೆ :ಸೋನಿಯಾ ಗಾಂಧಿ

ನವದೆಹಲಿ:

    ಭಾರತದಲ್ಲಿ ರಾಷ್ಟ್ರ ವಿರೋಧಿ ಮತ್ತು ಬಡಜನರ ವಿರೋಧಿ ಶಕ್ತಿಗಳು ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿವೆ ಮತ್ತು ದೇಶದ ಪ್ರಜಾಪ್ರಭುತ್ವದ ಮೇಲೆ ಸರ್ವಾಧಿಕಾರತ್ವದ ಪ್ರಭಾವ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

     ಸ್ವಾತಂತ್ರ್ಯ ಗಳಿಸಿ  75 ವರ್ಷಗಳ ನಂತರ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆಂದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಊಹಿಸಿರಲಿಲ್ಲ ಎಂದು ಅವರು ಹೇಳಿದರು, “ಕೆಟ್ಟ ಆಲೋಚನೆ ಈಗ ಪ್ರಾಬಲ್ಯ ಸಾಧಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ ಮತ್ತು ಪ್ರಜಾಪ್ರಭುತ್ವದ ಅಂಗಸಂಸ್ಥೆಗಳು ನಾಶವಾಗುತ್ತಿದೆ.”

     ಛತ್ತೀಸ್ ಘಡ ದ ನವ ರಾಯ್ ಪುರದಲ್ಲಿ ನಿರ್ಮಾಣವಾಗಲಿರುವ ನೂತನ ವಿಧಾನಸಭೆ ಕಟ್ಟಡದ ಶಿಲಾನ್ಯಾಸ  ಸಮಾರಂಭವನ್ನು ಸೋನಿಯಾ ಗಾಂಧಿ  ಉದ್ಘಾಟಿಸಿ ನೀಡಿದ ವಿಡಿಯೋ ಸಂದೇಶದಲ್ಲಿ  ಕೆಲ ಸಮಯದಿಂದ, ನಮ್ಮ ದೇಶವನ್ನು ಹಳಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮ ಪ್ರಜಾಪ್ರಭುತ್ವದ ಮುಂದೆ ಹೊಸ ಸವಾಲುಗಳು ಇದೆ. ದೇಶವು ಅಡ್ಡದಾರಿಯಲ್ಲಿ ಸಾಗುತ್ತದೆ. ಬಡಜನ ವಿರೋಧಿ ರಾಷ್ಟ್ರ ವಿರೋಧಿ ಶಕ್ತಿಗಳು ಜನರು ಪರಸ್ಪರ ಎದುರಾಳಿಗಳಂತೆ ಆಡಲು ದ್ವೇಷವನ್ನು, ಹಿಂಸೆಯ ವಿಷವನ್ನು ಪಸರಿಸುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap