ಲೈಂಗಿಕ ಕಿರುಕುಳದ ವಿರುದ್ಧ ದೂರು ದಾಖಲಿಸಲು ಯಾವುದೇ ವಯೋಮಿತಿ ಇಲ್ಲ : ಮೇನಕಾ ಗಾಂಧಿ

ನವ ದೆಹಲಿ:
      ನಮ್ಮ ದೇಶದಲ್ಲಿ ಇತ್ತೀಚೆಗೆ ಹೆಚ್ಚಾಗಿರುವ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ವಿರುದ್ಧದ ದೂರುಗಳನ್ನು ಸಲ್ಲಿಸಲು ವಯಸ್ಸಿನ ಮಿತಿಯನ್ನು ನಿಗದಿಗೊಳಿಸದಂತೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಮೇನಕಾ ಗಾಂಧಿ ಕಾನೂನು ಸಚಿವಾಲಯವನ್ನು ಕೇಳಿಕೊಂಡಿದ್ದಾರೆ.
      ಅದರಂತೆ ನಮ್ಮ ತಾಯಿಯರಂತೆ ನೋಡಬೇಕಾದ ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳ ಸಂಬಂಧ ದೂರು ನೀಡಲು  “ಮೀ ಟೂ” ಅಭಿಯಾನ ಆರಂಭವಾಗಿರುವುದಕ್ಕೆ  ಮನೇಕಾ ಗಾಂಧಿ ಸಂತಸ ವ್ಯಕ್ತಪಡಿಸಿದ್ದಾರೆ.  ಲೈಂಗಿಕ ಕಿರುಕುಳ ನೀಡಿದವರುಗಳ ವಿರುದ್ಧ ದೂರು ಸಲ್ಲಿಸಲು ಮಹಿಳೆಯರು ಮುಂದೆ ಬರಬೇಕು ಎಂದು ಹೇಳಿದ್ದಾರೆ, ಅನ್ಯಾಯಕ್ಕೆ ಒಳಗಾದವರು ಮುಂದೆ ಬರದಿದ್ದರೆ ಈ ರೀತಿಯ ಕಿರುಕುಳಗಳು ನಿಲ್ಲುವುದಿಲ್ಲ ಮತ್ತು ಅದನ್ನು ತಡೆಯಲು ನಮ್ಮೊಂದಿಗೆ ಕೈ ಜೋಡಿಸಿ ಎಂದು ಅವರು ಕರೆ ನೀಡಿದ್ದಾರೆ .
       ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯ ವಿರುದ್ಧ ದೂರು ಸಲ್ಲಿಸಲು ಯಾವುದೇ ವಯಸ್ಸಿನ ಮಿತಿ ನಿಗದಿಗೊಳಿಸಿದಂತೆ  ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿರುವುದಾಗಿ  ಮನೇಕಾ ಗಾಂಧಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಸಿಆರ್ ಪಿಸಿ ಸೆಕ್ಷನ್ 468 ಪ್ರಕಾರ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಸೇರಿದಂತೆ ಯಾವುದೇ ಅಪರಾಧಕ್ಕೆ ದೂರು ದಾಖಲಾದಮೂರು ವರ್ಷದೊಳಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ.ಸಿಆರ್ ಪಿಸಿ ಸೆಕ್ಷನ್ 473 ರ ಪ್ರಕಾರ,  ಒಂದು ವೇಳೆ ನ್ಯಾಯದ ಹಿತಾರಕ್ಷಣೆಗೆ ಸಂಬಂಧಿಸಿದ್ದಾಗಿದ್ದರೆ,  ನ್ಯಾಯಾಲಯ ಹಳೆಯ ಪ್ರಕರಣದ  ಬಗ್ಗೆ ಗಮನ ಹರಿಸಬಹುದಾಗಿದೆ ಅಥವಾ ಸೂಕ್ತ ವಿವರಣೆಗಾಗಿ ಪ್ರಕರಣದ ವಿಚಾರಣೆಯನ್ನು ವಿಳಂಬ ಮಾಡಬಹುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap