ನವದೆಹಲಿ :
ಕೋವಿಡ್ -19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಆರಂಭಿಕ ಹಂತದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯಗೊಳಿಸಲಾಗುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಹೇಳಿದ್ದಾರೆ.
ಸಾಪ್ತಾಹಿಕ ಆನ್‌ಲೈನ್ ಸಂವಾದವಾದ ‘ಸಂಡೇ ಸಂವಾದ್ ‘ ಸಮಯದಲ್ಲಿ ಶಾಲೆಗಳನ್ನು ಪುನಃ ತೆರೆಯುವ ಕುರಿತು ಮಾತನಾಡಿ ವಿದ್ಯಾರ್ಥಿಗಳು ಮತ್ತೆ ಶಾಲೆಗಳಿಗೆ ಬರುವಾಗ ಪೋಷಕರು ಸಹಿ ಮಾಡಿದ ಒಪ್ಪಿಗೆ ಪತ್ರವನ್ನು ಪಡೆಯಬೇಕಾಗುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.ಶಾಲೆಗಳನ್ನು ಪುನಃ ತೆರೆಯುವಾಗ ಮತ್ತು ನಿಯಮಿತ ತರಗತಿಗಳನ್ನು ಪುನರಾರಂಭಿಸುವಾಗ ಎಲ್ಲಾ ಶಾಲೆಗಳು ಗೃಹ ಸಚಿವಾಲಯ ಹೊರಡಿಸಿದ ಮಾನದಂಡಗಳನ್ನು ಅನುಸರಿಸುವುದು ಕಡ್ಡಾಯ ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ