ಈ ಸಮಯದಲ್ಲಿ ರಾಮ ಮಂದಿರ ಭೂಮಿಪೂಜೆ ಅಗತ್ಯ ಇರಲಿಲ್ಲ :ರಾಜ್ ಠಾಕ್ರೆ

ಮುಂಬೈ:

     ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿಪೂಜೆಯ ಅಗತ್ಯವಿರಲಿಲ್ಲ. ಪರಿಸ್ಥಿತಿ ಸಹಜತೆಗೆ ಬಂದಾಗ ಆಯೋಜನೆ ಮಾಡಬಹುದಿತ್ತು ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ .ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರ ಇ- ಭೂಮಿಪೂಜೆ ಸಲಹೆಯನ್ನು ಸಹ ತಿರಸ್ಕರಿಸಿರುವ  ರಾಜ್ ಠಾಕ್ರೆ, ಶಿಲಾನ್ಯಾಸ ಸಮಾರಂಭವನ್ನು ಬಹಳ ಉತ್ಸಾಹದಿಂದ ನಡೆಸಬೇಕು ಎಂದಿದ್ದಾರೆ.

    ಮಠಾಠಿಯ ನ್ಯೂಸ್ ಚಾನೆಲ್ ವೊಂದರ ಜೊತೆಗೆ  ಮಾತನಾಡಿದ ಎಂಎನ್ ಎಸ್ ಮುಖ್ಯಸ್ಥ, ಜನರು ವಿವಿಧ ಮನಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ ಭೂಮಿ ಪೂಜೆ ಅಗತ್ಯವಿರಲಿಲ್ಲ. ಎರಡು ತಿಂಗಳ ನಂತರ ಸಹಜ ಪರಿಸ್ಥಿತಿವೇರ್ಪಟ್ಟಿದ್ದಾಗ ಸಮಾರಂಭ ನಡೆಸಬಹುದಾಗಿತ್ತು. ಆಗ ಜನರು ಕೂಡಾ ಉತ್ಸಾಹದಿಂದ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap