ಕೇಂದ್ರದ ವಿರುದ್ಧ ಜನ ಧ್ವನಿಯತ್ತಲು ಇದು ಸಕಾಲ: ರಾಹುಲ್ ಗಾಂಧಿ

ನವದೆಹಲಿ:

     ಪ್ರಧಾನಿ ನರೇಂದ್ರ ಮೋದಿ ಅವರದ್ದು ಕನಿಷ್ಠ ಸರ್ಕಾರ, ಗರಿಷ್ಠ ಖಾಸಗೀಕರಣದ ಚಿಂತನೆಯಾಗಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.ಸರ್ಕಾರಿ ಹುದ್ದೆಗಳ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಧೋರಣೆಯನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ಶನಿವಾರ ಖಂಡಿಸಿದ್ದಾರೆ.

     ಕೇಂದ್ರ ಸರಕಾರವು ಕರೊನಾ ಸೋಂಕಿನ ನೆಪದಲ್ಲಿ ಸರಕಾರಿ ಕಚೇರಿಗಳನ್ನು ಕಾಯಂ ಸಿಬ್ಬಂದಿಯಿಂದ ‘ಮುಕ್ತ’ಗೊಳಿಸುವ ಉದ್ದೇಶ ಹೊಂದಿರುವಂತಿದೆ ಎಂದು ರಾಹುಲ್‌ ಗಾಂಧಿ ಅವರು ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.’ಯುವಕರ ಭವಿಷ್ಯವನ್ನು ಕಸಿದುಕೊಳ್ಳುವುದರ ಜತೆಗೆ ಮೋದಿ ತನ್ನ ಸ್ನೇಹಿತರನ್ನು ಉತ್ತೇಜಿಸುವುದು ಇದರ ಹಿಂದಿನ ಉದ್ದೇಶವಾಗಿದೆ’ ಎಂದು ಅವರು ಪ್ರಧಾನಿಯನ್ನು ಗುರಿಯಾಗಿಸಿ ಟ್ವೀಟ್‌ ಮಾಡಿದ್ದಾರೆ. ಈ ಸಂಬಂಧ ಸಾರ್ವಜನಿಕರು ಧ್ವನಿಯೆತ್ತಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಇತ್ತೀಚೆಗಷ್ಟೇ ಕೊರೊನಾ ವೈರಸ್ ನಿರ್ವಹಣೆ ಬಳಿಕ ಆರ್ಥಿಕತೆ ಚೇತರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.ಮೋದಿ ಅವರ ‘ನಗದು ರಹಿತ ಭಾರತ’ ನಿಜವಾಗಿಯೂ ಕಾರ್ಮಿಕ, ರೈತ, ಸಣ್ಣ ವ್ಯಾಪಾರಿಗಳ ಮುಕ್ತ ಭಾರತವಾಗಿದೆ ಎಂದು ಇತ್ತೀಚೆಗೆ ರಾಹುಲ್‌ ಗಾಂಧಿ ಆರೋಪ ಮಾಡಿದ್ದರು.

      2016ರ ನವೆಂಬರ್ 8ರಂದು ತೆಗೆದುಕೊಂಡ ಭೀಕರ ನೋಟು ರದ್ಧತಿಯ ಪರಿಣಾಮ 2020ರ ಆಗಸ್ಟ್ 31ರಂದು ಅನಾವರಣಗೊಂಡಿತು ಎಂದು ಟ್ವೀಟ್ ಮಾಡಿದ್ದರು. ಇಂದು ಮತ್ತೆ ಟ್ವೀಟ್ಗಳ ದಾಳಿ ಮುಂದುವರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap