ಗುಹಾಗೆ ಬೆದರಿಕೆ ಕರೆ ಮಾಡಿದ ಅಪರಿಚಿತ …!!!!

ಬೆಂಗಳೂರು:
       ಗೋ ರಕ್ಷರು ಎಂದು ಹೇಳಿಕೊಂಡು  ಗೋಮಾಂಸ ಸೇವನೆ ಕುರಿತು ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿಕೊಂಡಿದ್ದ ಖ್ಯಾತ ಅಂಕಣಕಾರ ಹಾಗೂ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಕರೆ ಮಾಡಿದ್ದು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

      ಇತ್ತೀಚೆಗೆ ರಾಮಚಂದ್ರ ಗುಹಾ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ವೊಂದನ್ನು ಮಾಡಿದ್ದರು. ಈ ಟ್ವೀಟ್ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು ಏಕೆಂದರೆ ಅದರಲ್ಲಿ ತಿಳಿಸಿರುವಂತೆ ಗುಹಾ ಮತ್ತು ಅವರ ಸ್ನೇಹಿತ ಇಬ್ಬರು ಬೀಫ್ ತಿನ್ನುತ್ತಿರುವಂತತಹ ಫೋಟೋ ಅದು ಆ ಫೋಟೊ ಮತ್ತು ಟ್ವೀಟ್ ಇಲ್ಲಿ ಸ್ಮರಿಸಬಹುದು. 
       ಬಿಜೆಪಿ ಸರ್ಕಾರವಿರುವ ಗೋವಾ ರಾಜ್ಯದಲ್ಲಿ ಗೋಮಾಂಸ ತಿಂದು ಸಂಭ್ರಮಿಸುತ್ತಿದ್ದೇನೆಂದು ಟ್ವೀಟ್ ಮಾಡಿದ್ದರು. ಇದಕ್ಕೆ ಟ್ವಿಟರ್ ನಲ್ಲಿ ಹಲವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ ಗುಹಾ ಅವರು ಟ್ವೀಟನ್ನು ಡಿಲೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಅಪರಿಚ ವ್ಯಕ್ತಿಯೊಬ್ಬ ಗುಹಾ ಅವರಿಗೆ ಕರೆ ಮಾಡಿ ಹೆದರಿಸಿದ್ದಾನೆಂದು ವರದಿಗಳು ತಿಳಿಸಿವೆ.
 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link