ನವದೆಹಲಿ:
ದೇಶದ ಎರಡು ಪ್ರಮುಖ ಪಾರಂಪರಿಕ ನಗರಗಳಾದ ಮೈಸೂರು ಮತ್ತು ಚೆನ್ನೈ ನಡುವೆ ಹೈಸ್ಪೀಡ್ ರೈಲು ಸೇವೆ ಆರಂಭಿಸಲು ಜರ್ಮನಿ ಮುಂದಾಗಿದೆ ಒಂದುವೇಳೆ ರೈಲ್ವೆ ಮಂಡಳಿಯಿಂದ ಅನುಮತಿ ಸಿಕ್ಕಿದ್ದೆ ಆದರೇ 2030ರ ವೇಳೆಗೆ ಈ ಎರಡೂ ನಗರಗಳ ನಡುವೆಯ ಪ್ರಯಾಣದ ಅವಧಿ 5 ಗಂಟೆಗೂ ಕಡಿಮೆ ಇರಲಿದೇ .
ಜರ್ಮನಿಯ ಸರ್ಕಾರ ಸ್ವಯಂ ಪ್ರೇರಿತವಾಗಿ ಈ ರೈಲು ಸಂಪರ್ಕ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದ್ದು . 435 ಕಿಲೋ ಮೀಟರ್ ಉದ್ದದ ಪ್ರಾಸ್ತಾವಿಕ ವರದಿಯನ್ನು ಜರ್ಮನ್ ರಾಯಭಾರಿ ಮಾರ್ಟಿನ್ ನೈ ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿ ಲೊಹನಿ ಅವರಿಗೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರತಿ ಗಂಟೆಗೆ 320 ಕಿಲೋ ಮೀಟರ್ ಗರಿಷ್ಠ ವೇಗದಲ್ಲಿ ಚಲಿಸುವ ರೈಲು ಇದಾಗಿದ್ದು 435 ಕಿಲೋ ಮೀಟರ್ ತಲುಪಲು ಈಗ ಬೇಕಾಗಿರುವ ಸಮಯ 7 ಗಂಟೆಯಿಂದ ಸುಮಾರು 2 ಗಂಟೆ 20 ನಿಮಿಷಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
