ಚುನಾವಣಾ ವೆಚ್ಚ ಭರಿಸಲು ಜರ್ಸಿ ಹರಾಜು ಹಾಕಿದ ಮಾಜಿ ಪುಟ್ಬಾಲ್ ನಾಯಕ..!!

ಗ್ಯಾಂಗ್‌ಟಾಕ್

       ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಲು ಟೀಂ ಇಂಡಿಯಾದ ಮಾಜಿ ನಾಯಕ ಸಜ್ಜಾಗುತ್ತಿದ್ದು. ಚುನಾವಣಾ ವೆಚ್ಚ ಭರಿಸಲು ಅಗದ ಕಾರಣ, ತಮ್ಮ ಎರಡು ಜರ್ಸಿಗಳನ್ನು ಹರಾಜಿಗಿಟ್ಟ ಪ್ರಸಂಗ ನಡೆದಿದೆ.

       ಎಚ್‌ಎಸ್‌ಪಿ ಪಕ್ಷದಿಂದ ಸ್ಪರ್ಧಿಸಲು ಬೇಕಾದ ನಿಧಿ ಸಂಗ್ರಹಕ್ಕಾಗಿ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಭೈಚುಂಗ್ ಭುಟಿಯಾ ಅವರು ಎರಡು ನೆಚ್ಚಿನ ಜರ್ಸಿಗಳನ್ನು ಹರಾಜು ಹಾಕಿದ್ದಾರೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಿದ್ದ ‘ಬಡತನದ ವಿರುದ್ಧ ಪಂದ್ಯ’ದಲ್ಲಿ ಧರಿಸಿದ್ದ ಒಂದು ಜರ್ಸಿ ಹಾಗೂ ಇನ್ನೊಂದು 2012ರಲ್ಲಿ ಬಾಯಾ ಮ್ಯೂನಿಕ್ ವಿರುದ್ಧದ ಕೊನೆ ಪಂದ್ಯದಲ್ಲಿ ಧರಿಸಿದ್ದ ಜರ್ಸಿಯಾಗಿದೆ ಎಂದು ತಿಳಿಸಿದ್ದಾರೆ.

         ಆ ಜರ್ಸಿಯಲ್ಲಿ ಫುಟ್ಬಾಲ್ ದಿಗ್ಗಜರಾದ ಫ್ರಾನ್ಸಿನ ಜಿನೆದ್ದೀನ್ ಜಿದಾನ್ ಹಾಗೂ ಪೋರ್ಚುಗಲ್‌ನ ಫಿಗೊ ಸಹಿತ ಇತರರ ಆಟೋಗ್ರಾಫ್ ಇದೆ. ಟ್ವಿಟ್ಟರ್ ನಲ್ಲಿ ಹರಾಜಿನ ಬಗ್ಗೆ ಬರೆದುಕೊಂಡಿರುವ ಭೈಚುಂಗ್, ಪ್ರೀತಿಯ ಫುಟ್ಬಾಲ್ ಅಭಿಮಾನಿಗಳೇ ಹಾಗೂ ದೇಶಬಾಂಧವರೆ, ನಾವು ಸಿಕ್ಕಿಂನಲ್ಲಿ ಎಚ್ಎಸ್ ಪಿ ಎಂಬ ರಾಜಕೀಯ ಪಕ್ಷವೊಂದನ್ನು ಆರಂಭಿಸುತ್ತಿದ್ದೇವೆ. ಇತರ ರಾಜ್ಯಗಳಂತೆಯೇ ನಮ್ಮಲ್ಲೂ ಕೂಡ ಭ್ರಷ್ಟಾಚಾರ, ನಿರುದ್ಯೋಗ, ರೈತರ ಬಿಕ್ಕಟ್ಟು ಇತ್ಯಾದಿ ಸಮಸ್ಯೆಗಳಿವೆ. ಈ ಹೋರಾಟದಲ್ಲಿ ನಿಮ್ಮ ಬೆಂಬಲದ ಅಗತ್ಯವಿದೆ ಎಂದಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link