ನಿರ್ಭಯಾ ಹಂತಕರಿಗೆ ನಾಳೆ ಗಲ್ಲು ಶಿಕ್ಷೆ ಜಾರಿ ಇಲ್ಲ

ದೆಹಲಿ

    ತೀವ್ರ ಕುತೂಹಲ ಕೆರಳಿಸಿದ್ದ ನಿರ್ಭಯಾ ಹತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ನಾಳೆ ಪ್ರಕರಣದ ನಾಲ್ಕು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡುವಂತಿಲ್ಲ ಎಂದು ಹೇಳಿದೆ.

      ಹೌದು, ನಿರ್ಭಯಾ ಆರೋಪಿಗಳನ್ನು ಗಲ್ಲಿಗೇರಿಸಲು ಮುಹೂರ್ತ ಫಿಕ್ಸ್ ಆಗಿದ್ದು, ನಾಳೆ ಬೆಳಿಗ್ಗೆ 6 ಗಂಟೆಗೆ ನಾಲ್ವರು ಅಪರಾಧಿಗಳು ಗಲ್ಲಿಗೇರಲಿದ್ದಾರೆ.

       ಸುಪ್ರೀಂ ಕೋರ್ಟ್ ಪವನ್ ಗುಪ್ತಾ ಕ್ಷಮಾಪಣಾ ಅರ್ಜಿ ವಜಾ ಮಾಡ್ತಿದ್ದಂತೆ ಪಟಿಯಾಲಾ ಹೌಸ್ ಕೋರ್ಟ್ ಪವನ್ ಮತ್ತು ಅಕ್ಷಯ್ ಅರ್ಜಿಯನ್ನು ವಜಾಗೊಳಿಸಿದೆ. ಇಬ್ಬರು, ಮಾರ್ಚ್ 3ರಂದು ನಡೆಯುವ ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ಮನವಿ ಸಲ್ಲಿಸಿದ್ದರು. ಈ ಕುರಿತು ಇಂದು ವಿಚಾರಣೆ ನಡೆಸಿದ ಕೋರ್ಟ್ ಅರ್ಜಿ ವಜಾಗೊಳಿಸಿದ್ದು, ಗಲ್ಲು ಶಿಕ್ಷೆಯನ್ನು ಮಾರ್ಚ್ 3ಕ್ಕೆ ನಿಗದಿ ಮಾಡುವ ಮೂಲಕ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ದೋಷಿಗಳ ಮತ್ತೊಂದು ಪ್ರಯತ್ನವನ್ನು ಸುಪ್ರೀಂಕೋರ್ಟ್ ವಿಫಲಗೊಳಿಸಿದೆ.

    ದೆಹಲಿ ಖೈದಿಗಳ ನಿಯಮಾವಳಿಗಳ ಪ್ರಕಾರ ಗಲ್ಲು ಶಿಕ್ಷೆಗೆ ಗುರಿಯಾದ ಯಾವುದೇ ಅಪರಾಧಿಯ ಕ್ಷಮಾದಾನ ಅರ್ಜಿ ತಿರಸ್ಕಾರಗೊಂಡರೆ ಅಪರಾಧಿಗೆ ಅಂದಿನಿಂದ 14 ದಿನಗಳ ಕಾಲ  ಕಾಲಾವಕಾಶ ನೀಡಬೇಕು. ಇದೇ ಕಾರಣಕ್ಕೆ ನ್ಯಾಯಾಲಯ ಗಲ್ಲು ಶಿಕ್ಷೆ ಜಾರಿಯನ್ನು ತಡೆ ಹಿಡಿದಿದೆ ಎನ್ನಲಾಗುತ್ತಿದೆ. 

      ಈ ಹಿಂದೆ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪಿನ ಅನ್ವಯ ಎಲ್ಲವೂ ಅಂದುಕೊಂಡಂತೆ ನಡೆದರೆ ನಾಳೆ ಮುಂಜಾನೆ ಎಲ್ಲ ನಾಲ್ವರು ಹತ್ಯಾಚಾರಿಗಳಿಗೆ ನೇಣು ಶಿಕ್ಷೆಯಾಗಲಿದೆ.