ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾದ ಸಂಸ್ಕರಿತ ಹಾಲು..!

ನವದೆಹಲಿ:

    ಕೇವಲ ಪ್ರಚಾರದ ಸಾಧನವಾಗಿ ಉಪಯೋಗಿಸುತ್ತಿದ್ದ “ಗುಣ ಮಟ್ಟದ ಹಾಲು ಎಂಬ ಪದಕ್ಕೆ ” ಅಪಮಾನ ಎಂಬಂತೆ ನಾವು ಮಾತ್ರ ನಿಮಗೆ ಶುದ್ಧ  ಹಾಲು ನೀಡುತ್ತೇವೆ ಎಂದು ಹೇಳುತ್ತಿದ್ದ ದೇಶದ ಪ್ರಮುಖ ಬ್ರ್ಯಾಂಡುಗಳು  ಸೇರಿದಂತೆ ಸಂಸ್ಕರಿತ ಹಾಲಿನ ಮಾದರಿಗಳನ್ನು ಪರೀಕ್ಷಿಸಿದ ಎಫ್ಎಸ್ಎಸ್ಎಐ ಪರೀಕ್ಷೆಗಾಗಿ ತೆಗೆದುಕೊಳ್ಳಾದ ಬ್ರಾಂಡ್ ಗಳಾವುವು ಸೂಚಿತ ಗುಣಮಟ್ಟವನ್ನು ಹೊಂದಿಲ್ಲ ಎಂಬ ವಿಚಾರ ಇದೀಗ ಹೊರಹಾಕಿದೆ.  

    ಎಫ್ಎಸ್ಎಸ್ಎಐ 2018ರಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಸಗಳಿಂದ  ಸುಮಾರುಉ 1,103 ನಗರ ಮತ್ತು ಪಟ್ಟಣಗಳಿಂದ ಸಂಸ್ಕರಿತ ಮತ್ತು ಕಚ್ಚಾ ಹಾಲಿನ 6,432 ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ ಒಳಪಡಿಸಿದಾಗ, ಸಂಸ್ಕರಿಸಿದ ಹಾಲಿನ ಮಾದರಿಗಳ ಪೈಕಿ ಶೇ.37.7ರಷ್ಟು ಹಾಲಿನ ಮಾದರಿಗಳು ನಿಗದಿತ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿರುವುದು ಕಂಡು ಬಂದಿದೆ ಎನ್ನಲಾಗಿದೆ. 

    ಸುರಕ್ಷತೆ ಮಾನದಂಡಗಳನ್ನು ಅನುಸರಿಸುವಲ್ಲಿಯೂ ಶೇ.10.4ರಷ್ಟು ಕಂಪನಿಗಳು ವಿಫಲವಾಗಿವೆ ಎಂದು ವರದಿ ತಿಳಿಸಿದೆ,  ಇವುಗಳಲ್ಲಿ ಆಫ್ಲಾಟಾಕ್ಸಿನ್ ಎಂ-1, ಪ್ರತಿ ಜೀವಕಗಳು ಮತ್ತು ಕೀಟನಾಶಕಗಳು ಕಂಡು ಬಂದಿವೆ. ಸಂಸ್ಕರಿಸಿದ ಹಾಲಿನ ಕಲಬೆರಕೆಗಿಂತಲೂ, ಕಲ್ಮಶಲೀಖರಣ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಆದರೆ, ಕೇವಲ 12 ಮಾದರಿಗಳು ಮಾತ್ರ ಕಲಬೆರಕೆಯಾಗಿರುವುದು ಕಂಡು ಬಂದಿದೆ ಎನ್ನಲಾಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap