ನವದಹಲಿ:
ಟ್ರಾಯ್ ನಿಭಂದನೆಗಳ ಪ್ರಕಾರ ಭಾರತದಲ್ಲಿ ಕೆಲವು ಕಂಪನಿಗಳು ತಮ್ಮ ನೆಟ್ ವರ್ಕ್ ಅನ್ನು ಸ್ಥಗಿತಗೊಳಿಸಲು ಮುಂದಾಗಿವೆ ಅದರಲ್ಲಿ ಪ್ರಮುಖವಾಗಿ ದೇಶದ ಪ್ರಸಿದ್ಧ ಏರ್‌ಸೆಲ್ ಕಂಪನಿ ಸೇವೆಗಳನ್ನು ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ.
ಟ್ರಾಯ್ ವರದಿ ಪ್ರಕಾರ, ಬೇರೆ ನೆಟ್‌ವರ್ಕ್ ಏರ್‌ಸೆಲ್ ಗ್ರಾಹಕರು ಪೋರ್ಟ್ ಆಗಲು ಕಡೆಯ ಅವಕಾಶವನ್ನು ನೀಡಲಾಗಿದೆ ಎಂದು ತಿಳಿಸಿದೆ. ಇದರಂತೆ ಅಕ್ಟೋಬರ್ 31 ರ ನಂತರ ಏರ್ಸೆಲ್ ಹಾಗೂ ಡಿಶ್ನೆಟ್ ಕಂಪೆನಿಗಳ ಸೇವೆಗಳು ಲಭ್ಯವಿರುವುದಿಲ್ಲ ಎಂದು ಟ್ರಾಯ್ ಹೇಳಿದೆ.
ಏರ್‌ಸೆಲ್‌ನ ಚಂದಾದಾರರು ಬೇರೆ ಟೆಲಿಕಾಂ ಕಂಪನಿಗಳ ನೆಟ್ವರ್ಕ್ ಅನ್ನು ಅಕ್ಟೋಬರ್ 31 2019 ರ ಅಂತ್ಯದ ವೇಳೆಗೆ ಆಯ್ಕೆ ಮಾಡಬೇಕಾಗುತ್ತದೆ ಇಲ್ಲದೇ ಹೋದಲ್ಲಿ ಅವರ ನಂಬರ್ ಡೆಡ್ ಆಗುತ್ತದೆ ಎಂದು ತಿಳಿಸಿದೆ ಏರ್ಸೆಲ್ ಮತ್ತು ಡಿಶ್ ನೆಟ್ ವೈರ್ಲೆಸ್ ಚಂದಾದಾರರಿಗೆ ಅಂತಿಮ ಅವಕಾಶವನ್ನು ನೀಡಲಾಗುತ್ತದೆ ಎಂದು ಟ್ರಾಯ್ ನೀಡಿರುವ ಸೂಚನೆಯಲ್ಲಿ ತಿಳಿಸಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
