ತ್ರಿವಳಿ ತಲಾಖ್ ಭವಿಷ್ಯ ಇಂದು ನಿರ್ಧಾರ…!?

ನವದೆಹಲಿ:
       ಮುಸ್ಲಿಂ ಸಮುದಾಯದ ಕಟ್ಟುಪಾಡುಗಳನ್ನು ನೋಡಿದರೆ ಅಲ್ಲಿ ಹೆಣ್ಣಿಗೆ ನೀಡುವ ಗೌರವದ ಜೋತೆಗೆ ಅದರಲ್ಲಿ ಅನಾನುಕೂಲಗಳು ಸಹ ಸಮ ಪ್ರಮಾಣದಲ್ಲಿವೆ ಎಂದು ವಾದ ಮಂಡಿಸಿ ಮುಸ್ಲಿಂಮರು ಈವರೆಗೂ ನೀಡುತ್ತಿದ್ದ ತ್ರಿವಳಿ ತಲಾಕ್ ಅನ್ನು ರದ್ದು ಮಾಡಿ ನಮ್ಮ ಸಂಪ್ರದಾಯದ ಔನತ್ಯವನ್ನು ಹಾಳು ಮಾಡಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಮಸ್ಲಿಂ ಸಂಘಟನೆಗಳು ನಡೆಸುತ್ತಿದ್ದಪ್ರತಿಭಟನೆ ಮತ್ತು ಕಾನೂನು ಹೋರಾಟಗಳಿಗೆ ಇಂದು ಮುಕ್ತಿ ಕಾಣುವ ಸಾಧ್ಯತೆಗಳು ಕಾಣುತ್ತಿವೆ .
       ಮುಸ್ಲಿಂ ಮಹಿಳೆಯರ ವಿವಾಹ ಭದ್ರತಾ ಹಕ್ಕು ರಕ್ಷಣೆಗೆ ಒತ್ತು ನೀಡುವ ತ್ರಿವಳಿ ತಲಾಖ್ ರದ್ದತ್ತಿ ಮಸೂದೆಯನ್ನು ಸೋಮವಾರ ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತಿದ್ದು,ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುವುದಾಗಿ  ತಿಳಿಸಿದೆ.
       ಲೋಕಸಭೆಯಲ್ಲಿ ಅಂಗೀಕಾರಿಸಿರುವ ತ್ರಿವಳಿ ತಲಾಖ್ ರದ್ದತ್ತಿ ಮಸೂದೆಯನ್ನು ಇಂದು ರಾಜ್ಯಸಭೆಯಲ್ಲಿ ಸರ್ಕಾರ ಮಂಡಿಸುತ್ತಿದ್ದು, ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಬಿಜೆಪಿ ತನ್ನೆಲ್ಲಾ  ಸದಸ್ಯರಿಗೆ ವಿಪ್ ಜಾರಿ ಮಾಡಿದೆ.ತ್ರಿವಳಿ ತಲಾಖ್ ಮಸೂದೆಗೆ ಕೆಲವು ತಿದ್ದುಪಡಿ ತರಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ. ಈಗ ಇರುವ ಸ್ಥಿತಿಯಲ್ಲಿಯೇ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲು ನಾವು ಎಂದಿಗೂ ಬಿಡುವುದಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ತಿಳಿಸಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap