ಹೈದರಾಬಾದ್
ನಾಲ್ಕು ದಿನಗಳ ಹಿಂದೆ ನಕ್ಸಲರಿಂದ ಅಪಹರಣಕ್ಕೀಡಾಗಿದ್ದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಮುಖಂಡ ಹಾಗೂ ಮಾಜಿ ಮಂಡಲ್ ಪರಿಷತ್ ಪ್ರಾದೇಶಿಕ ಕ್ಷೇತ್ರ (ಎಂಪಿಟಿಸಿ) ಸದಸ್ಯ ಎನ್.ಶ್ರೀನಿವಾಸ್ ರಾವ್ ಚತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.
ಪೊಲೀಸ್ ಮಾಹಿತಿದಾರನೆಂದು ಶಂಕಿಸಿ ಟಿಆರ್‌ಎಸ್ ನಾಯಕನನ್ನು ಹತ್ಯೆ ಮಾಡಿರುವುದಾಗಿ ನಕ್ಸಲರು ಮೃಹ ದೇಹದ ಬಳಿ ಚೀಟಿಯೊಂದನ್ನು ಬರೆದಿಟ್ಟು ಹೋಗಿದ್ದಾರೆ. ನಕ್ಸಲರು ರಾವ್‌ಗೆ ಸೇರಿದ ದ್ವಿಚಕ್ರ ವಾಹನವನ್ನು ಅವರ ಮೃತದೇಹದ ಬಳಿ ಬಿಟ್ಟು ಹೋಗಿದ್ದಾರೆ.ಕೊಥಗುಡೆಮ್ ಜಿಲ್ಲೆಯ ಬೆಸ್ತಕೋತುರು ಗ್ರಾಮದಲ್ಲಿ ಈ ತಿಂಗಳ 8 ರಂದು ಶಸ್ತ್ರಸಜ್ಜಿತ ನಕ್ಸಲರ ತಂಡ ರಾವ್ ಅವರನ್ನು ಅವರ ನಿವಾಸದಿಂದ ಅಪಹರಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ