ನವದೆಹಲಿ:
ದೆಹಲಿಯ ಪ್ರತಿಷ್ಠೆ ಹೆಚ್ಚಿಸಲು ಮತ್ತು ಸಂಚಾರ ಸುಗಮಗೊಳಿಸಲೆಂದು ಉದ್ಘಾಟನೆಗೊಂಡ ದೆಹಲಿಯ ಸಿಗ್ನೇಚರ್ ಸೇತುವೆ ಈಗ ಪುಂಡ ಪೋಕರಿಗಳ ಆಗರವಾಗಿದೆ ಮತ್ತು ಅವ್ಯವಸ್ಥೆ ತಾಂಡವವಾಡುತ್ತಿದೆ ಇದು ನಿರ್ಮಾಣಗೊಂಡರೆ ಸಂಚಾರ ದಟ್ಟಣೆ ಕಡಿಮೆ ಯಾಗುವ ಬದಲಿಗೆ ಈ ಸೇತುವೆಯ ಮೇಲೆ ಟ್ರಾಫಿಕ್ ಜಾಮ್ ಮುಂತಾದವು ಸರ್ವೇ ಸಾಮಾನ್ಯ ಇಂತಹ ದುರ್ಗಮ ಸೇತುವೆ ಮೇಲೆ ಸಾಹಸ ಪ್ರದರ್ಶಿಸುವ ಸಲುವಾಗಿ ಹೋದ ಇಬ್ಬರು ಯುವಕರು ಬೈಕ್ ಸವಾರರು ಮೃತಪಟ್ಟ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸೇತುವೆ ನಿರ್ಮಾಣಕ್ಕಾಗಿ ಸುಮಾರು 8 ವರ್ಷಗಳ ಕಾಲ ತೆಗೆದುಕೊಂಡಿದ್ದು, ನವೆಂಬರ್ 4 ರಿಂದ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಹೊಸ ಸೇತುವೆ ಮೇಲೆ ಸಂಚಾರಿ ಉಲ್ಲಂಘನೆ ಜೊತೆಗೆ ಪ್ರಾಣಕ್ಕೂ ಸಂಚಕಾರ ತಂದುಕೊಳ್ಳುವಂತಹ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳೀಸಲಾಗಿತ್ತಾದರೂ ಇದ್ದೇನ್ನೂ ಲೆಕ್ಕಿಸದ ಹುಡುಗರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಲಾಗಿದೆ.
ಮೃತರನ್ನು ಹಿಂಧೂರಾವ್ ಮೆಡಿಕಲ್ ಕಾಲೇಜಿನ ವಿಧ್ಯಾರ್ಥಿಗಳೆಂದು ಪತ್ತೆ ಹಚ್ಚಲಾಗಿದೆ ಮತ್ತು ತಾವು ಬೈಕ್ ಸವಾರಿ ಮಾಡುವಾಗಲೇ ಸ್ವಂತಿ ತೆಗೆದು ಕೊಳ್ಳುವ ಭರದಲ್ಲಿ ಬೈಕ್ ರಸ್ತೆ ವಿಭಜಗಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 30 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ