ಅಂಡರ್ 17 ಮಹಿಳಾ ಫುಟ್ ಬಾಲ್ ಟೂರ್ನಿ ಮುಂದೂಡಿಕೆ…!

ನವದೆಹಲಿ

      ಈ ವರ್ಷದ ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯಬೇಕಿದ್ದ ಯು 17 ಮಹಿಳಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯನ್ನು ಫೀಫಾ ಮುಂದೂಡಿದೆ. ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾವೈರಸ್‌ ಸೋಂಕಿನ ಕಾರಣದಿಂದ ಭಾರತದಲ್ಲಿ ನಡೆಯಬೇಕಿದ್ದ ಪ್ರತಿಷ್ಠಿತ ಟೂರ್ನಿ ಮುಂದೂಡಲ್ಪಟ್ಟಿದೆ ೆಂದು ಮಂಡಳಿ ಸ್ಪಷ್ಠಪಡಿಸಿದೆ.

     17 ಮತ್ತು 17ರ ಕೆಳಗಿನ ವಯೋಮಾನದ ಯುವತಿಯರಿಗಾಗಿ ನಡೆಸಲಾಗುವ ವಿಶ್ವಕಪ್ ಫುಟ್ಬಾಲ್ ಟೂರ್ನಿ ನವೆಂಬರ್ 2ರಿಂದ 22ರ ವರೆಗೆ ಭಾರತದ ಐದು ತಾಣಗಳಾದ ಕೋಲ್ಕತ್ತಾ, ಗುವಾಹಟಿ, ಭುವನೇಶ್ವರ, ಅಹ್ಮದಾಬಾದ್ ಮತ್ತು ನವಿ ಮುಂಬೈನಲ್ಲಿ ನಡೆಯಬೇಕಿತ್ತು ಆದರೆ ಕೊರೋನಾ ಸೋಂಕಿನ ಕಾರಣ ಮುಂದೂಡಲಾಗಿದೆ.

     16 ತಂಡಗಳು ಪಾಲ್ಗೊಳ್ಳುವ ಈ ಅಂಡರ್ 17 ಮಹಿಳಾ ಫುಟ್ಬಾಲ್ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿದ್ದರಿಂದ ಭಾರತಕ್ಕೆ ‘ಅಟೋಮ್ಯಾಟಿಕ್ ಕ್ವಾಲಿಫೈಯರ್ಸ್’ ಲಭಿಸಿತ್ತು. ಅಂದರೆ 17 ವಯೋಮಾನದ ಮಹಿಳಾ ವಿಶ್ವಕಪ್‌ಗಾಗಿ ಭಾರತ ಇದೇ ಚೊಚ್ಚಲ ಬಾರಿಗೆ ಪ್ರವೇಶ ಗಿಟ್ಟಿಸಿಕೊಂಡಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap