ಯುಪಿಎ ಸಭೆಗೆ ಚಕ್ಕರ್ ಹಾಕುವರೇ ಮಾಯಾವತಿ..?

ನವದೆಹಲಿ:

    ಸಿಎಎ ಮತ್ತು ವಿಶ್ವವಿದ್ಯಾಲಯಗಳಲ್ಲಿ ನಡೆದ ಹಿಂಸಾಚಾರದ ಕುರಿತು ಚರ್ಚೆ ನಡೆಸಿ ಮುಂದಿನ ಪ್ರತಿಭಟನಾ ಕಾರ್ಯತಂತ್ರದ ಕುರಿತಂತೆ ಇಂದು ಕರೆದಿರುವ ವಿರೋಧ ಪಕ್ಷಗಳ ಸಭೆಗೆ ಬಿ ಎಸ್ ಪಿ ಕೂಡ ಗೈರಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

     ಕಾಂಗ್ರೆಸ್ ನೊಂದಿಗಿನ ಭಿನ್ನಾಭಿಪ್ರಾಯದಿಂದ ಬಿಎಸ್ ಪಿ ಸಭೆಗೆ ತನ್ನ ಪ್ರತಿನಿಧಿಯನ್ನು ಕಳುಹಿಸುವುದು ಬಹುತೇಕ ಅನುಮಾನವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ತಾನು ಸಭೆಗೆ ಬರುವುದಿಲ್ಲ ಎಂದು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಈ ಹಿಂದೆಯೇ ತಿಳಿಸಿದ್ದ ಬೆನ್ನಲೆ ಈ ಬೆಳವಣಿಗೆ ಅಚ್ಚರಿಯ ಜೊತೆಗೆ ಯುಪಿಎಗೆ ತೀವ್ರ ಆಘಾತ ನೀಡಿದಂತಾಗಿದೆ .

     ಕಳೆದ ಡಿಸೆಂಬರ್ 17ರಂದು ವಿರೋಧ ಪಕ್ಷಗಳು ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ತಿದ್ದುಪಡಿ ಪೌರತ್ವ ಮಸೂದೆ, ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಬಗ್ಗೆ ಮಧ್ಯ ಪ್ರವೇಶಿಸಬೇಕೆಂದು ಕೇಳಿಕೊಳ್ಳಲು ಹೋಗಿದ್ದವು. ಆದರೆ ಬಿಎಸ್ ಪಿ ಸೇರಿರಲಿಲ್ಲ, ಬಿಎಸ್ ಪಿ ಸಂಸದೀಯ ನಿಯೋಗ ಡಿಸೆಂಬರ್ 18ರಂದು ಭೇಟಿ ಮಾಡಿ ಚರ್ಚೆ ನಡೆಸಿತ್ತು.ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆದಿರುವ ಸಭೆಯಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಈಗಾಗಲೇ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ