ನವದೆಹಲಿ :
ವೊಡಾಫೋನ್ ಗ್ರೂಪ್ ಪ್ಲ್ಯಾಕ್ 2 ಬಿಲಿಯನ್ ಡಾಲರ್ ಮೊತ್ತದ ಹಿಮ್ಮುಖ ತೆರಿಗೆ ವಿವಾದದಲ್ಲಿ ಭಾರತ ಸರ್ಕಾರದ ವಿರುದ್ಧ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಮೊಕದ್ದಮೆ ಯನ್ನು ಗೆದ್ದಿದೆ ಎಂದು ತಿಳಿದು ಬಂದಿದೆ. ವೊಡಾಫೋನ್ ಮೇಲೆ ಭಾರತ ಸರ್ಕಾರ ತೆರಿಗೆ ಬಾಧ್ಯತೆಯನ್ನು ಹೇರಿರುವುದು ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಹೂಡಿಕೆ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ನ್ಯಾಯಮಂಡಳಿ ಯು ತೀರ್ಪು ನೀಡಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ತೆರಿಗೆ ಇಲಾಖೆಯ ನಡವಳಿಕೆಯು ನ್ಯಾಯೋಚಿತ ಮತ್ತು ನ್ಯಾಯಸಮ್ಮತ ವಾದ ನಡವಳಿಕೆಯನ್ನು ಉಲ್ಲಂಘಿಸುತ್ತದೆ ಎಂದು ಶಾಶ್ವತ ನ್ಯಾಯಾಲಯ ತೀರ್ಪು ನೀಡಿದೆ. ವೊಡಾಫೋನ್ ಪರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹೊರತಾಗಿಯೂ ದ್ವಿಪಕ್ಷೀಯ ಹೂಡಿಕೆ ಒಪ್ಪಂದ ಉಲ್ಲಂಘನೆಯಾಗಿದೆ ಎಂದು ಗಮನಿಸಿರುವ ಕೋರ್ಟ್, ವೊಡಾಫೋನ್ ಗೆ 40.3 ಕೋಟಿ (GBP 4.3 ಮಿಲಿಯನ್) ಮರುಪಾವತಿ ಮಾಡುವಂತೆ ಭಾರತಕ್ಕೆ ಸೂಚಿಸಿದೆ. ವೊಡಾಫೋನ್ 2016ರಲ್ಲಿ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ (ಐಸಿಜೆ) ಮೊರೆ ಹೋಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
