ವಾರಣಾಸಿ :
ದೇಶದಲ್ಲಿ ಸದ್ಯ ಈರುಳ್ಳಿ ಬೆಲೆ ಗಗನಕ್ಕೇರಿರುವುದು ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದ್ದು ಇದನ್ನು ಜನ ಸೋಷಿಯಲ್ ಮೀಡಿಯಾ ಹಾಗು ವಾಸ್ಥವಿಕವಾಗಿ ವಿವಿಧ ರೀತಿಗಳಲ್ಲಿ ಪ್ರತಿಭಟಿಸುತ್ತಿದ್ದಾರೆ.ಅದರ ಒಂದು ಉದಾಹರಣೆ ಈರುಳ್ಳಿ ಖರೀದಿಸಲು ಲೋನ್ ನೀಡುತ್ತಿರುವುದು.
ಈರುಳ್ಳಿ ಬೆಲೆ ಏರಿಕೆಯ ಕಾರಣದಿಂದ ಸರ್ಕಾರವನ್ನು ಟಾರ್ಗೆಟ್ ಮಾಡುವುದಕ್ಕೆ ಈರುಳ್ಳಿ ಬೆಲೆ ಏರಿಕೆ ಒಂದು ಅದ್ಬುತ ಅಸ್ತ್ರವಾಗಿ ಪ್ರತಿಪಕ್ಷಗಳಿಗೆ ದೊರೆತಿದ್ದು, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಯುವಮೋರ್ಚಾ ಘಟಕ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ವಿನೂತನ ರೀತಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಅದೇ ಈರುಳ್ಳಿ ಖರೀದಿಸಲು ಲೋನ್ ನೀಡುವ ವಿನೂತನ ಆಫರ್! ಇದಕ್ಕಾಗಿ ವಾರಾಣಸಿಯಲ್ಲಿ ಪ್ರತ್ಯೇಕ ಕೌಂಟರ್ ನ್ನು ತೆರೆಯಲಾಗಿದ್ದು, ಆಧಾರ್ ಕಾರ್ಡ್ ನ್ನು ಅಡ ಇಟ್ಟು ಈರುಳ್ಳಿ ಪಡೆಯಬಹುದಾಗಿದೆ. ಈರುಳ್ಳಿ ಬೆಲೆ ಏರಿಕೆಯನ್ನು ಪ್ರತಿಭಟಿ ಸಲು ಈ ರೀತಿಯ ಕೌಂಟರ್ ತೆರೆಯಲಾಗಿದೆ, ಆಧಾರ್ ಕಾರ್ಡ್ ಅಥವಾ ಬೆಳ್ಳಿ ಆಭರಣಗಳನ್ನು ಅಡ ಇಟ್ಟುಕೊಂಡು ಈರುಳ್ಳಿ ನೀಡಲಾಗುತ್ತದೆ, ಕೆಲವು ಅಂಗಡಿಗಳಲ್ಲಿ ಈರುಳ್ಳಿಯನ್ನು ಲಾಕರ್ ಗಳಲ್ಲಿಯೂ ಇಡಲಾಗಿದೆ ಎಂದು ಸಮಾಜವಾದಿ ಪಕ್ಷದ ಕಾರ್ಯಕರ್ತರು ಕೇಂದ್ರದ ವಿರುದ್ಧ ಕಿಡಿ ಕಾರಿದ್ದಾರೆ.