ನವದೆಹಲಿ: 
ಸೌರವ್ಯೂಹದಲ್ಲಿ ಭೂಮಿಗೆ ಸನಿಹವಿರುವ ಗ್ರಹಗಳಲ್ಲಿ ಒಂದಾದ ಮಂಗಳಗ್ರಹದ ಅಧ್ಯಯನಕ್ಕಾಗಿ ಅಮೆರಿಕ, ಯುರೋಪ್ ಒಕ್ಕೂಟ ಮತ್ತು ಭಾರತ ಸೇರಿ ಅನೇಕ ರಾಷ್ಟ್ರಗಳು ಪ್ರಯತ್ನಿಸುತ್ತಿದ್ದು. ಮಂಗಳನ ಮೇಲೆ ನೀರು ಮತ್ತು ಜೀವಿಗಳು ವಾಸವಾಗಿದ್ದ ಕುರುಹುಗಳನ್ನು ಪತ್ತೆ ಮಾಡಲು ಹರಸಾಹಸಪಡುತ್ತಿವೆ. ಇದೇ ವೇಳೆ ಮಂಗಳಗ್ರಹದ ಮೇಲೆ ನೀರು ಇದೆ ಎಂಬುದು ಪತ್ತೆಯಾಗಿರುವುದಾಗಿ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್ಎ) ಹೇಳಿದೆ.
ಮಂಗಳಗ್ರಹದ ಮೇಲೆ ಬೃಹತ್ ಮಂಜುಗಡ್ಡೆಯ ಕುಳಿ ಪತ್ತೆಯಾಗಿದೆ. ಅಂದಾಜು 82 ಕಿ.ಮೀ. ಅಗಲವಾಗಿರುವ ಈ ಕುಳಿಯಲ್ಲಿ 1.8 ಕಿ.ಮೀ. ಆಳವಾದ ಮಂಜುಗಡ್ಡೆ ಇದೆ. ಕೊರೊಲೇವ್ ಕುಳಿ ಎಂದು ಗುರುತಿಸಲಾಗುವ ಈ ಕುಳಿಯ ದೃಶ್ಯಗಳನ್ನು ತನ್ನ ಮಾರ್ಸ್ ಎಕ್ಸ್ಪ್ರೆಸ್
ಕೆಂಪು ಗ್ರಹದ ದಕ್ಷಿಣ ಭಾಗದಲ್ಲಿ ಒಲಿಂಪಿಯಾ ಆ್ಯಂಡೆ ಎಂಬ ಮರಳಿನ ದಿಬ್ಬಿವಿದೆ. ಇದು ಮಂಗಳಗ್ರಹದ ಉತ್ತರ ಧ್ರುವದ ಒಂದು ಭಾಗವನ್ನು ಆವರಿಸಿದೆ. ಈ ಕುಳಿಯಲ್ಲಿನ ಮಂಜುಗಡ್ಡೆ ವರ್ಷಪೂರ್ತಿ ಸ್ಥಿರವಾಗಿರುತ್ತದೆ. ಏಕೆಂದರೆ ಈ ಭಾಗದಲ್ಲಿನ ವಾಯುಭಾರ ಕುಸಿತ ನೈಸರ್ಗಿಕವಾಗಿ ತಂಪು ವಾತಾವರಣಕ್ಕೆ ಕಾರಣವಾಗಿದೆ. ಮಂಜುಗಡ್ಡೆ ಮೇಲಿನ ಗಾಳಿ ತಣ್ಣಗಿದ್ದು, ಸುತ್ತಲಿನ ಗಾಳಿಗಿಂತಲೂ ಭಾರವಾಗಿದೆ. ಗಾಳಿಯು ಶಾಖನಿರೋಧಕ ಗುಣವನ್ನು ಹೊಂದಿರುವ ಕಾರಣ ಕುಳಿಯಲ್ಲಿರುವ ಮಂಜುಗಡ್ಡೆ ಕರಗದೆ ಹಾಗೆಯೇ ಗಟ್ಟಿಯಾಗಿ ಉಳಿದಿದೆ ಎಂದು ಇಎಸ್ಎ ವಿವರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








