ನವದೆಹಲಿ
ನೇರ ತೆರಿಗೆ ಸಂಗ್ರಹವನ್ನು 2019-20ರ ಕೇಂದ್ರ ಬಜೆಟ್‌ನಲ್ಲಿ ನಿಗದಿಪಡಿಸಿರುವ 13.35 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲು ತೆರಿಗೆದಾರ ಸಂಸ್ಥೆಯಗಳು ಪ್ರಯತ್ನಿಸುತ್ತಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.159ನೇ ಆದಾಯ ತೆರಿಗೆ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ, ನಾವು ನೇರ ತೆರಿಗೆ ಸಂಗ್ರಹವನ್ನು ದ್ವಿಗುಣಗೊಳಿಸಿದ್ದೇವೆ ಮತ್ತು ಅದು ಸಣ್ಣ ಸಾಧನೆಯಲ್ಲ. ತಂಡದ ಈ ಸಾಧನೆಯನ್ನು ಸದಾ ಶ್ಲಾಘಿಸುತ್ತೇನೆ. ಈ ವರ್ಷದ ಗುರಿ 11.8 ಲಕ್ಷ ಕೋಟಿ ರೂ.ಗಳಿಂದ 13.3 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದು ತೆರಿಗೆದಾರ ಸಂಸ್ಥೆಗಳಿಗೆ ಇದು ದೊಡ್ಡ ವಿಷಯವೇನಲ್ಲ ಎಂದರು.
ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಮತ್ತು ಕಂದಾಯ ಗುಪ್ತಚರ ಇಲಾಖೆ ತೆರಿಗೆ ಸಂಗ್ರಹದ ಪ್ರಮುಖ ಸಂಸ್ಥೆಗಳಾಗಿದ್ದು, ಸರಿಯಾಗಿ ತೆರಿಗೆ ಮೌಲ್ಯಮಾಪನ ನಡೆಸುತ್ತಿವೆ. ಸರಿಯಾದ ಮಾಹಿತಿ ಮತ್ತು ತನಿಖೆ ನಡೆಸುತ್ತಿವೆ ಎಂದರು.
ಇಲಾಖೆಯ ಮೌಲ್ಯಮಾಪನದ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿದ್ದರೆ, ತೆರಿಗೆ ವಂಚನೆಯನ್ನು ಪರಿಶೀಲಿಸಲು ತೆರಿಗೆದಾರರು ಹೆಚ್ಚುವರಿ ಪ್ರಯತ್ನಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.
ತೆರಿಗೆ ವಂಚಕರನ್ನು ಸರಿಯಾಗಿ ವಿಚಾರಣೆ ನಡೆಸಬೇಕು. ಜೊತೆಗೆ, ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ಸನ್ಮಾನಿಸುವಂತ ಕ್ರಮವನ್ನು ಕೈಗೆತ್ತಿಕೊಳ್ಳಬೇಕು ಸಚಿವರು, ಈ ಸಂಸ್ಥೆಗಳಿಗೆ ನಿರ್ದೇಶನ ನೀಡಿದರು.