ನವದೆಹಲಿ:
ಕೊವಿಡ್ 19ರ ಹಾವಳಿ ತಡೆಯಲು ಭಾರತ ಸಿದ್ದವಾಗಿದೆ ಎಂದು ಕೇಂದ್ರ ಆರೋಗ್ಯ ಖಾತೆ ಸಚಿವ ಡಾ ಹರ್ಷವರ್ಧನ್ ಸದನದಲ್ಲಿ ಹೇಳಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ಹರ್ಷವರ್ಧನ್ ಅವರು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡುವ ಮೊದಲೇ ಭಾರತ ಈ ಸೋಂಕಿನಿಂದ ತಡೆಗಟ್ಟುವ ಹಲವು ಕ್ರಮಗಳನ್ನು ಕೈಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆ ಕೊವಿಡ್-19ನ್ನು ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡದಿದ್ದರೂ ಕೂಡ ಅದನ್ನು ಎದುರಿಸಲು ಮತ್ತು ತಡೆಗಟ್ಟಲು ದೇಶಗಳು ಸರ್ವ ರೀತಿಯಲ್ಲಿ ಸನ್ನದ್ಧವಾಗಬೇಕು ಎಂದು ಸೂಚಿಸಿತ್ತು. ಈ ನಿಟ್ಟಿನಲ್ಲಿ ಭಾರತ ತಳಮಟ್ಟದಿಂದ ತಯಾರಿ ನಡೆಸಿದ್ದು ಜನವರಿ 17ರಿಂದಲೇ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವ ಹರ್ಷವರ್ಧನ್ ಹೇಳಿದರು.
ನಿನ್ನೆಯವರೆಗೆ ಅಂದರೆ ಮಾರ್ಚ್ 4ರವರೆಗೆ ಭಾರತದಲ್ಲಿ 29 ಕೊರೊನಾ ವೈರಸ್ ಕೇಸುಗಳು ಪತ್ತೆಯಾಗಿವೆ. ಇದಕ್ಕೆ ಸಚಿವರ ತಂಡವೊಂದು ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿದೆ. ನಾನು ಪ್ರತಿದಿನ ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿದ್ದೇನೆ. ಸಚಿವರ ಗುಂಪು ಕೂಡ ಪರಿಸ್ಥಿತಿಯ ನಿಗಾ ವಹಿಸುತ್ತಿದೆ ಎಂದರು.ವಿದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಲಾಗುತ್ತಿದ್ದು ಸಮುದಾಯ ಕಣ್ಗಾವಲಿನಡಿಯಲ್ಲಿ ನಿನ್ನೆಯವರೆಗೆ 28 ಸಾವಿರದ 529 ಮಂದಿಯನ್ನು ಕರೆತಂದು ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
