ಭಾರತದಲ್ಲಿ ಹೂಡಿಕೆಗೆ ಸೂಕ್ತ ವಾತಾವರಣ ನಿರ್ಮಿಸಲು ನಾವು ಬದ್ದರಾಗಿದ್ದೇವೆ..!

ನವದೆಹಲಿ:

     ಭಾರತವನ್ನು ಹೂಡಿಕೆ ಸ್ನೇಹಿ ಮಾಡಲು ಇನ್ನಷ್ಟು ಪೂರಕ ವಾತಾವರಣ ನಿರ್ಮಿಸಿಕೊಡಲು ನಮ್ಮ ಸರ್ಕಾರ ಸಿದ್ದವಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

   ಸದ್ಯ ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ-ಸ್ವೀಡನ್​ ವಾಣಿಜ್ಯ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ  ಹೂಡಿಕೆ ಮಾಡುವುದಕ್ಕೆ ಎಲ್ಲರನ್ನೂ ಆಹ್ವಾನಿಸುವ ಕೆಲಸವನ್ನು ನಾನು ಮಾಡಬಲ್ಲೆ ಮತ್ತು ಭಾರತ ಸರ್ಕಾರ ಹೂಡಿಕೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ಬದ್ಧವಾಗಿದೆ. ಆ ಸುಧಾರಣೆ ಬ್ಯಾಂಕಿಂಗ್ ಇರಬಹುದು ಅಥವಾ ಇನ್ಶೂರೆನ್ಸ್ ಇರಬಹುದು ಅಥವಾ ಮೈನಿಂಗ್ ಹೀಗೆ ಯಾವುದೇ ಸೆಕ್ಟರ್​ನಲ್ಲಾದರೂ ಸರಿ ಅವಶ್ಯಕತೆ ಬಿದ್ದರೆ ನಮ್ಮ ಸರ್ಕಾರ ಸುಧಾರಣಾ ಕ್ರಮಗಳನ್ನು ರೂಪಿಸಲು ತಯಾರಿದೆ ಎಂದು ಹೇಳಿದರು.

   ಭಾರತವನ್ನು ಹೂಡಿಕೆ ಸ್ನೇಹಿ ತಾಣ ಮತ್ತು ಮಾರುಕಟ್ಟೆಯ ಮೇಲೆ ಇನಷ್ಟು ನಂಬಿಕೆ ಬರುವಂತೆ ಮಾಡಲು ಅಗತ್ಯವಿರುವ ಕ್ರಮ ಕೈಗೊಳ್ಳಲು ನಾವು ಸಿದ್ದರಿದ್ದೇವೆ ಎಂದಿದ್ದಾರೆ. ಇನ್ನೂ ಹೆಚ್ಚಿನ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಕ್ತ ಮನಸ್ಸು ಹೊಂದಿದೆ.
   ಮೂಲಸೌಕರ್ಯ ವಿಭಾಗದಲ್ಲಿ ಮುಂದಿನ ಐದು ವರ್ಷಗಳಲ್ಲಿ ಸರ್ಕಾರ 1 ಲಕ್ಷ ಕೋಟಿ ರೂ ಹೂಡಿಕೆ ಮಾಡಲಿದೆ ಎಂದು ಹೇಳಿದರು. ಅಂತೆಯೇ ಭಾರತದಲ್ಲಿನ ಮೂಲಸೌಕರ್ಯ ಪ್ರಾಜೆಕ್ಟ್​ಗಳಲ್ಲಿ ಹೂಡಿಕೆ ಮಾಡುವಂತೆ ಸ್ವೀಡನ್​ನ ಸಂಸ್ಥೆಗಳಿಗೆ ಆಹ್ವಾನ ನೀಡಿದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link