ಆದಾಯ ತೆರಿಗೆ ಇಲಾಖೆ ಕುರಿತ ಜನರ ಮನಸ್ಥಿತಿ ಬದಲಿಸಬೇಕಿದೆ : ನಿರ್ಮಲಾ ಸೀತಾರಾಮನ್

ಕೋಲ್ಕತಾ

    ನಾಗರಿಕ ಕೇಂದ್ರಿತ ಸೇವೆಗಳಿಗೆ ಒತ್ತು ನೀಡುವ ಮೂಲಕ ಆದಾಯ ತೆರಿಗೆ ಇಲಾಖೆ ಬಗೆಗಿನ ನಿಲುವನ್ನು ಬದಲಿಸಬೇಕಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒತ್ತಿ ಹೇಳಿದ್ದಾರೆ.

    ಕೋಲ್ಕತಾದಲ್ಲಿ ಶುಕ್ರವಾರ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ವಲಯಗಳ ಕೇಂದ್ರೀಯ ನೇರ ತೆರಿಗೆ ಮಂಡಳಿ ಹಾಗೂ ಪರೋಕ್ಷ ಮತ್ತು ಅಬಕಾರಿ ಸುಂಕ ಮಂಡಳಿಯ ಅಧಿಕಾರಿಗಳೊಂದಿಗೆ ಸಂವಾದ ಅವರು, ಆದಾಯ ಸಂಗ್ರಹದ ಗುರಿ ಸಾಧನೆಯ ಭರದಲ್ಲಿ ಹೆಚ್ಚಿನ ಸಂಗ್ರಹದತ್ತ ಗಮನಹರಿಸದಂತೆ ಕಿವಿಮಾತು ಹೇಳಿದರು.

     ಕಂದಾಯ ಕಾರ್ಯದರ್ಶಿ ಡಾ. ಅಜಯ್ ಭೂಷಣ್ ಪಾಂಡೆ, ಕೇಂದ್ರ ನೇರ ತೆರಿಗೆ ಮಂಡಳಿ ಅಧ್ಯಕ್ಷ ಚಂದ್ರ ಮೂಡಿ, ಕೇಂದ್ರ ಪರೋಕ್ಷ ತೆರಿಗೆ ಮತ್ತು ಅಬಕಾರಿ ಸುಂಕ ಮಂಡಳಿ ಅಧ್ಯಕ್ಷ ಪ್ರಣಬ್ ಕುಮಾರ್ ದಾಸ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

     ಕೇಂದ್ರ ಹಣಕಾಸು ಸಚಿವರು ದೇಶಾದ್ಯಂತ ತೆರಿಗೆ ಅಧಿಕಾರಿಗಳು, ಪ್ರತಿನಿಧಿಗಳೊಂದಿಗೆ ನಡೆಸುತ್ತಿರುವ ಏಳನೇ ಸಭೆ ಇದಾಗಿತ್ತು.
ರಾಷ್ಟ್ರ ನಿರ್ಮಾಣದಲ್ಲಿ ತೆರಿಗೆ ಸಂಗ್ರಹಕಾರರ ಮಹತ್ವವನ್ನು ತಿಳಿಸಿದ ನಿರ್ಮಲಾ ಸೀತಾರಾಮನ್, ನಾಗರಿಕ ಕೇಂದ್ರಿತ ಸೇವೆಗಳಿಗೆ ಒತ್ತು ನೀಡಬೇಕಾದ ಅಗತ್ಯವಿದೆ ಎಂದರು.

    ಈ ನಿಟ್ಟಿನಲ್ಲಿ ವಿಜಯದಶಮಿ ದಿನದಂದು ಮುಖತಃ ಭೇಟಿ ಇಲ್ಲದೇ ಆದಾಯ ತೆರಿಗೆ ಪರಿಶೀಲನಾ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದರು.ಆಧುನಿಕ ತಂತ್ರಜ್ಞಾನ ಬಳಕೆ ಮೂಲಕ ತೆರಿಗೆ ಸೋರಿಕೆ ನಿಯಂತ್ರಿಸಬೇಕು ಎಂದು ಅವರು ಹೇಳಿದರು. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆದಾರರ ಅನುಕೂಲಕ್ಕಾಗಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಅವರು ಸಲಹೆ ನೀಡಿದರು.

    ಆದಾಯ ತೆರಿಗೆ ಇಲಾಖೆ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇಲಾಖೆಗಳೆರಡೂ ರೀಫಂಡ್‌ (ಮರುಪಾವತಿ)ಗಳನ್ನು ಸಕಾಲಕ್ಕೆ ಮಾಡಿವೆ ಮತ್ತು ತೆರಿಗೆ ಪಾವತಿದಾರರ ಕುಂದುಕೊರತೆಗಳನ್ನು ಶೀಘ್ರವಾಗಿ ಪರಿಹರಿಸಿವೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

    ಅಬಕಾರಿ ಇಲಾಖೆಯ ವಿದ್ಯುನ್ಮಾನ ಮಾಹಿತಿ ಹಂಚಿಕೆ ವ್ಯವಸ್ಥೆ ಉದ್ಘಾಟಿಸಿದರು ಮತ್ತು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮ(ಎಮ್‌ಎಸ್‌ಎಮ್‌ಇ) ಗಳ ಕಿರುಹೊತ್ತಿಗೆ ಹಾಗೂ ಜಿಎಸ್‌ಟಿ ಯಡಿ ಸಬ್ ಕಾ ವಿಶ್ವಾಸ್ ಕುರಿತ ಪ್ರಶ್ನೋತ್ತರ ಕೈಪಿಡಿಯನ್ನು ಬಿಡುಗಡೆ ಮಾಡಿದರು.

     ತೆರಿಗೆ ಅಧಿಕಾರಿಗಳು ಕೇವಲ ಯಾಂತ್ರಿಕವಾಗಿ ಕಾರ್ಯನಿರ್ವಹಿಸದೇ ತೆರಿಗೆ ಪಾವತಿದಾರರನ್ನು ಸಂಪರ್ಕಿಸಲು ಇತರ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಚಂದ್ರ ಮೂಡಿ ಸಲಹೆ ನೀಡಿದರು.ತೆರಿಗೆ ಅಧಿಕಾರಿಗಳು ತೆರಿಗೆ ಸುಗಮಗೊಳಿಸುವವರಾಗುತ್ತಿದ್ದು ಆದಾಯ ತೆರಿಗೆ ಇಲಾಖೆ ಮಹತ್ತರ ಬದಲಾವಣೆ ಕಾಣುತ್ತಿದೆ. ಆದರೆ ಉದ್ದೇಶಪೂರ್ವಕ ತೆರಿಗೆ ವಂಚಕರಿಗೆ ಕಾನೂನಿನನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap