ನಿಮ್ಮ ಜುಟ್ಟು ನಮ್ಮ ಕೈಯಲ್ಲಿ : ಕೇಂದ್ರದ ಎಚ್ಚರಿಕೆ…!!!

ನವದೆಹಲಿ:
        ದೇಶದ ಯಾವುದೇ ಮೂಲೆಯಲ್ಲಾಗಲಿ ಯಾವುದೇ ಕಂಪ್ಯೂಟರ್ ನಲ್ಲಾಗಲಿ ಕಳುಹಿಸಿದ, ಸ್ವೀಕರಿಸಿದ ಅಥವಾ ಸಂಗ್ರಹಿಸಿದ ಮಾಹಿತಿಗಳ ಮೇಲೆ ನಿಗಾ ಇಡಲು ನಮ್ಮ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಇದರಿಂದಾಗಿ ನಿಮ್ಮ ಜುಟ್ಟು ನಮ್ಮ ಕೈಯಲ್ಲಿ ಎಂಬುದನ್ನು ಕೇಂದ್ರ ಸಾಂಕೇತಿಕವಾಗಿ ತಿಳಿಸಿದೆ.
        ಈ ಸಂಬಂಧ ಸುಮಾರು 10 ಕೇಂದ್ರಿಯ ಸಂಸ್ಥೆಗಳಿಗೆ ಸಂಪೂರ್ಣ ಅಧಿಕಾರವನ್ನು ಸಹ ಈಗಾಗಲೇ ನೀಡಿ ಆದೇಶ ಸಹಹ ನೀಡಿ ಕೇಂದ್ರ ಆದೇಶ ಹೊರಡಿಸಿದೆ, ಗುಪ್ತಚರ ಇಲಾಖೆ, ಮಾದಕದ್ರವ್ಯ ನಿಯಂತ್ರಣ ಮಂಡಳಿ, ರಾಷ್ಟ್ರೀಯ ತನಿಖಾ ಸಂಸ್ಥೆ, ಜಾರಿ ನಿರ್ದೇಶನಾಲಯ, ಕೇಂದ್ರ ನೇರ ತೆರಿಗೆ ಮಂಡಳಿ, ಕಂದಾಯ ಗುಪ್ತಚರ ನಿರ್ದೇಶನಾಲಯ, ಸಿಬಿಐ, ಸಂಪುಟ ಕಾರ್ಯದರ್ಶಿ, ಸಿಗ್ನಲ್ ಗುಪ್ತಚರ ನಿರ್ದೇಶನಾಲಯ(ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಿಗೆ ಮಾತ್ರ) ಮತ್ತು ಪೊಲೀಸ್ ಆಯುಕ್ತರಿಗೆ ಈ ಪರಮೋಚ್ಚ ಅಧಿಕಾರ ನೀಡಲಾಗಿದೆಎಂದು ತಿಳಿದು ಬಂದಿದೆ.
           ಯಾವುದೇ ಕಂಪ್ಯೂಟರ್ ಬಳಕೆದಾರರು ಅಥವಾ ಸೇವೆ ಒದಗಿಸುವವರು ಎಲ್ಲಾ ಸೌಲಭ್ಯಗಳನ್ನು ಮತ್ತು ತಾಂತ್ರಿಕ ನೆರವನ್ನು ಈ 10 ಏಜೆನ್ಸಿಗಳಿಗೆ ವಿಸ್ತರಿಸಲು ಬದ್ಧರಾಗಿರಬೇಕು ಎಂದು ಗೃಹ ಕಾರ್ಯದರ್ಶಿಗಳು ಕಟ್ಟು ನಿಟ್ಟಿನ ಸೂಚನೆ ರವಾನಿಸಿದೆ ಎಂದು ತಿಳಿದು ಬಂದಿದೆ. 
           ನಿಯಮ ಉಲ್ಲಂಘಿಸಿದರೆ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap