ವೈಮಾನಿಕ ದಾಳಿ ಬಗ್ಗೆ ಶಂಕೆ ವ್ಯಕ್ತಪಡಿಸಿದವರಿಗೆ ಖಡಕ್ ಉತ್ತರ ಕೊಟ್ಟ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ!!!

ನವದೆಹಲಿ:
       ನಾವು ನೋಡುವುದು ಬರಿ  ಗುರಿಗಳನ್ನು  ಅಲ್ಲಿ ಸಂಭವಿಸಿದ ಸಾವು-ನೋವುಗಳ ಲೆಕ್ಕಾಚಾರ ನಮ್ಮ ಕೆಲಸವಲ್ಲ ಎಂದು ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಖಾರವಾಗಿ ಹೇಳಿದ್ದಾರೆ.

       ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್ ನಲ್ಲಿದ್ದ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಕ್ಯಾಂಪ್ ಗಳ ಮೇಲೆ ವಾಯುಸೇನೆ ದಾಳಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿರುವ ವಿವಾದಗಳ ಕುರಿತು ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಅವರು ಸ್ಪಷ್ಟನೆ ನೀಡಿದ್ದಾರೆ.

         ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಾಯುಸೇನೆ ದಾಳಿ ಸಂಬಂಧ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆಯ ವಾಯುಸೇನೆ ಸಾಮರ್ಥ್ಯದ ಬಗ್ಗೆ ಶಂಕೆ ಬೇಡ. ವಾಯುಸೇನೆ ಸಮರ್ಥವಾಗಿದ್ದು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸದಾ ಸನ್ನದ್ಧವಾಗಿರುತ್ತದೆ ಎಂದು ಹೇಳಿದ್ದಾರೆ.
         ಅಂತೆಯೇ ಉಗ್ರ ಕ್ಯಾಂಪ್ ಗಳ ಮೇಲಿನ ದಾಳಿ ಕುರಿತು ಮಾತನಾಡಿದ ಧನೋವಾ ಅವರು, ಪೂರ್ವ ಯೋಜನೆಯಂತೆ ನಾನು ನಿಗದಿ ಪಡಿಸಿದ್ದ ಗುರಿಗಳ ಮೇಲೆ ನಾವು ದಾಳಿ ಮಾಡಿದ್ದೇವೆ. ಆದರೆ ಅಲ್ಲಿ ಸಂಭವಿಸಿರಬಹುದಾದ ಸಾವುನೋವುಗಳ ಕುರಿತ ಲೆಕ್ಕಾಚಾರವನ್ನು ನಾವು ಮಾಡಿಲ್ಲ. ಅದೇನಿದ್ದರೂ ಅಲ್ಲಿನ ಸರ್ಕಾರದ ಕೆಲಸವಷ್ಟೇ.. ಸಾವುನೋವಿನ ಕುರಿತು ಸ್ಪಷ್ಟನೆ ನೀಡುವ ಜವಾಬ್ದಾರಿ ನಮ್ಮದಲ್ಲ ಎಂದು ಹೇಳಿದ್ದಾರೆ
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ