ಮುಂಬೈ:
ನೆರೆಯ ಮಹಾರಾಷ್ಟ್ರದಲ್ಲಿ ಚುನಾವಣೆ ಮುಗಿದು ಸುಮಾರು ಎರಡು ವಾರವಾದರು ಸರ್ಕಾರ ರಚನೆ ಕಸರತ್ತು ಮುಂದುವರೆಯುತ್ತಿದ್ದು, ಇಷ್ಟು ದಿನ ಮೈತ್ರಿ ಮಂತ್ರ ಜಪಿಸುತ್ತಿದ್ದ ಶಿವಸೇನೆ ಸ್ವತಂತ್ರ್ಯವಾಗಿ ಸರ್ಕಾರಬ ರಚನೆಗೆ ತನ್ನ ಬದ್ದ ವೈರಿಯೆಂದೆ ಕರೆಸಿಕೊಳ್ಳವ ಎನ್ಸಿಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುತ್ತೇವೆ ಎಂದು ಇನ್ನು ಕನಸು ಕಾಣುವ ಮುನ್ನವೆ ಅದು ಕಮರಿಹೋಗಿದೆ.
ಅದು ಏಕೆಂದರೆ ಎನ್ ಸಿ ಪಿ ಪಕ್ಷದ ಮಮುಖ್ಯಸ್ಥ ಶರದ್ ಪವಾರ್ ಅವರು ನಮ್ಮ ಪಕ್ಷ ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲು ಇಚ್ಚಿಸುತ್ತೇನೆಯೆ ಹೊರತು ಅಧಿಕಾರಕ್ಕಾಗಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಖಂಡಾ ತುಂಡವಾಗಿ ತಿಳಿಸಿದ್ದಾರೆ..ಬಿಜೆಪಿ-ಶಿವಸೇನೆ ಪರವಾಗಿ ರಾಜ್ಯದ ಜನತೆ ತೀರ್ಪು ಕೊಟ್ಟಿದ್ದು ಅವರು ಸರ್ಕಾರ ರಚನೆ ಮಾಡಬೇಕು. ತಮ್ಮ ಪಕ್ಷ ಮತ್ತು ಕಾಂಗ್ರೆಸ್ ಗೆ ಜವಾಬ್ದಾರಿಯುತ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಜನತೆ ತೀರ್ಪು ಕೊಟ್ಟಿದ್ದಾರೆ ಎಂದು ಮುಂಬೈಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.