ನವದೆಹಲಿ:
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬಂದರೆ ತ್ರಿವಳಿ ತಲಾಖ್ ಕಾನೂನನ್ನು ನಾವು ಖಂಡಿತವಾಗಿ ರದ್ದು ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಎಐಸಿಸಿ ಅಲ್ಪಸಂಖ್ಯಾತ ವಿಭಾಗ ರಾಷ್ಟ್ರೀಯ ಸಭೆಯಲ್ಲಿ ಮಾತನಾಡಿದ ರಾಹುಲ್ ಈ ರೀತಿ ಹೇಳಿಕೆ ನೀಡಿದ್ದಾರೆ . ಭಾಷಣ ಮಾಡುವಾಗ ತಮ್ಮ ರಾಜಕೀಯ ವಿರೋಧಿಯಾಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಹರಿಹಾಯ್ದ ರಾಹುಲ್, ಆರ್‍ಎಸ್‍ಎಸ್ ನಾಗಪುರದಿಂದ ದೇಶವನ್ನು ಆಡಳಿತ ಮಾಡಲು ಮುಂದಾಗುತ್ತಿದೆ. ನರೇಂದ್ರ ಮೋದಿ ಅದರ ಪಾತ್ರ ಮುಖ್ಯವಾಗಿದ್ದು ನಾಗಪುರದಿಂದ ಮೋಹನ್ ಭಾಗವತ್ ರಿಮೋಟ್ ಕಂಟ್ರೋಲ್ ಹಿಡಿದು ನಿಯಂತ್ರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ