ಮುಂಬೈ:
ರಾತ್ರೋರಾತ್ರಿ ಎನ್ಸಿಪಿ ಕೆಲ ನಾಯಕರ ಜೊತೆ ಸೇರಿ ಬಿಜೆಪಿ ಸರ್ಕಾರ ರಚನೆ ಮಾಡಿರುವುದ್ದರಿಂದ ಶಾಕ್ ಗೆ ಗುರಿಯಾಗೊರುವ ಶಿವಸೇನೆ , ಬಹುಮತ ಸಾಬೀತು ಪಡಿಸಲು ಅವಕಾಶ ಕೊಟ್ಟರೆ ಕೇವಲ 10 ನಿಮಿಷದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬಹುಮತ ಸಾಬೀತಿಗೆ 24 ಗಂಟೆ ತೆಗೆದುಕೊಂಡರೆ ನಾವು 10 ನಿಮಿಷದಲ್ಲಿ ಬಹುಮತ ಸಾಬೀತು ಪಡಿಸುತ್ತೇವೆ ನೀವು ಇದನ್ನು ಮಾಡಬಲ್ಲಿರಾ ಎಂದು ಸವಾಲು ಹಾಕಿದ್ದಾರೆ.ಮಹಾರಾಷ್ಟ್ರ ರಾಜ್ಯಪಾಲರು ಬಹುಮತ ಸಾಬೀತು ಪಡಿಸಲು ಬಿಜೆಪಿಗೆ 1 ವಾರದ ಸುದೀರ್ಘ ಸಮಯವನ್ನು ನೀಡಲಾಗಿದೆ. ಆದರೆ ನಮಗೆ ಅವಕಾಶ ಕೊಟ್ಟರೆ ನಾವು ಹತ್ತೇ ನಿಮಿಷದಲ್ಲಿ ಸಾಬೀತುಪಡಿಸುತ್ತೇವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ದೇವೇಂದ್ರ ಫಡ್ನವಿಸ್ ಅವರಿಗೆ ಬಹುಮತವಿದ್ದರೆ ಈ ಅವಸರದ ಅವಶ್ಯಕತೆಯೇ ಬರುತ್ತಿರಲಿಲ್ಲಾ. ಇದು ಮಹಾರಾಷ್ಟ್ರದ ಜನತೆ ಮಲಗಿದ್ದಾಗ ಪ್ರಮಾಣ ವಚನ ಸ್ವೀಕರಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ