ನವದೆಹಲಿ
ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ವಾಪಸ್ ಪಡೆಯುವ ಮೂಲಕ ರಾಜ್ಯವನ್ನು ವಿಭಜನೆ ಮಾಡುತ್ತಿದೆ ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ ಸಂವಿಧಾನದ 371 ನೇ ವಿಧಿಯ ಬಗ್ಗೆ ಕೇಂದ್ರದ ನಿಲುವು ಏನು? ಅವುಗಳ ಮುಂದಿನ ಪಾಡೇನು ಎಂದು ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ಲೋಕಸಭೆಯಲ್ಲಿ ಮಂಗಳವಾರ ಪ್ರಶ್ನೆ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ವಾಪಸ್ ಪಡೆಯುವ ಶಾಸನಬದ್ಧ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಗಾಲ್ಯಾಂಡ್ ರಾಜ್ಯದ 371 (ಎ) ಕಲಂ ಕುರಿತು ಸರ್ಕಾರ ನಿಲುವನ್ನು ಗೃಹ ಸಚಿವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು
ಚರ್ಚೆಯ ವೇಳೆ, ರಾಷ್ಟ್ರ ನಿರ್ಮಾಣದಲ್ಲಿ ಮತ್ತು ವಿವಾದಿತ ಮೂರು ಪ್ರದೇಶಗಳಾದ ಜಮ್ಮು ಕಾಶ್ಮೀರ ಹೈದರಾಬಾದ್ ಮತ್ತು ಜುನಾಗಡವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ನೆಹರೂ ಕೊಡುಗೆಯನ್ನು ತಿವಾರಿ ಸದನದಲ್ಲಿ ಶ್ಲಾಘಿಸಿದರು.ಇದಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಗೃಹ ಸಚಿವ ಅಮಿತ್ ಶಾ ಮದ್ಯಪ್ರವೇಶ ಮಾಡಿ ವಾಸ್ತವವಾಗಿ, ಜುನಾಗಡ ಮತ್ತು ಹೈದರಾಬಾದ್ ಅನ್ನು ಭಾರತದ ನಿಯಂತ್ರಣಕ್ಕೆ ತರುವಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು.
ಸಂವಿಧಾನದ ವಿಧಿ 371 (ಎ) 370 ರಂತೆಯೇ ಇದೆ ನಾಗಾಗಳ ಧಾರ್ಮಿಕ ಅಥವಾ ಸಾಮಾಜಿಕ ಆಚರಣೆಗಳು, ಅವರ ಸಂಪ್ರದಾಯ ಕಾನೂನು ವಿಚಾರಗಳಿಗೆ ಸಂಬಂಧಿಸಿದಂತೆ ಸಂಸತ್ತಿನ ಕಾಯಿದೆ ನಾಗಾಲ್ಯಾಂಡ್ ರಾಜ್ಯಕ್ಕೆ ಅನ್ವಯಿಸುವುದಿಲ್ಲ ಎಂದೂ ಸಚಿವರು ಉತ್ತರಿಸಿದರು.
ಅಸ್ಸಾಂ ಮತ್ತು ಸಿಕ್ಕಿಂನಂತಹ ಇತರ ರಾಜ್ಯಗಳಿಗೂ ಇಂತಹ ವಿಶೇಷ ನಿಬಂಧನೆಗಳಿವೆ ಅವುಗಳ ಗತಿಯೇನು ಎಂದು ತಿವಾರಿ ಪ್ರಶ್ನೆ ಮಾಡಿದರು.ಚರ್ಚೆಯ ಸಮಯದಲ್ಲಿ, ಬಿಜೆಪಿ ಜಮ್ಮು ಸಂಸದ ಜುಗಲ್ ಕಿಶೋರ್ ಶರ್ಮಾ ಅವರು ಸರ್ಕಾರದ ಕ್ರಮವನ್ನು ಶ್ಲಾಘಿಸಿ 370 ನೇ ವಿಧಿಯು ಭಾರತದ ಅಭಿವೃದ್ಧಿ ಮತ್ತು ಏಕತೆ ಮತ್ತು ಸಮಗ್ರತೆಗೆ ಅಡ್ಡಿಯಾಗಿತ್ತು ಬಿಜೆಪಿ ಸರ್ಕಾರ ಅದನ್ನು ಸರಿಪಡಿಸುವ ಕೆಲಸ ಮಾಡಿದೆ ಇದಕ್ಕೆ ಎಲ್ಲರ ಬೆಂಬಲ ಸಹಕಾರ ಅಗತ್ಯವಾಗಿದೆ ವಾಸ್ತವಿಕವಾಗಿ ನೆಹರು ಜಮ್ಮು ಮತ್ತು ಕಾಶ್ಮೀರದ ಹಿತಾಸಕ್ತಿಗೆ ಧಕ್ಕೆ ತಂದಿದ್ದರು ಎಂದು ಹೇಳಿದರು.
ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರವೂ ಭಾರತದ ಭಾಗ ಎಂದು ಬಿಜೆಪಿ ಬಲವಾಗಿ ನಂಬಿದೆ ಅದನ್ನು ಮರಳಿ ಪಡೆಯಲೂ ನಾವು ನಿರ್ಧರಿಸಿದ್ದೇವೆ ಎಂದು ಶರ್ಮಾ ಹೇಳಿದರು.371, ನೇ ವಿಧಿ , ಮಹಾರಾಷ್ಟ್ರದ ಮರಾಠವಾಡ ಪ್ರದೇಶಗಳು ಮತ್ತು ರಾಜ್ಯ ಮತ್ತು ಸೌರಾಷ್ಟ್ರ, ಕಚ್ ಮತ್ತು ಗುಜರಾತ್‌ನ ಉಳಿದ ಭಾಗಗಳಿಗೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಅಧಿಕಾರವನ್ನು ರಾಷ್ಟ್ರಪತಿಯವರಿಗೆ ನೀಡಲಿದೆ . ಆಂಧ್ರಪ್ರದೇಶ, ಕರ್ನಾಟಕ ಮತ್ತು ಗೋವಾಕ್ಕೆ ಸಂಬಂಧಿಸಿದಂತೆ ಕೆಲವು ಕ್ರಮ ತೆಗೆದುಕೊಳ್ಳಲು ಇದು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ.
ಕೇಂದ್ರವು ಕೈಗೊಂಡಿರುವ ಕ್ರಮಗಳಲ್ಲಿ ಜನರ ಇಚ್ಚಾಶಕ್ತಿ ಪ್ರತಿಫಲಿಸುವುದಿಲ್ಲ ಮತ್ತು ರಾಜ್ಯ ವಿಧಾನಸಭೆ ಈಗ ಸಕ್ರಿಯವಾಗಿಲ್ಲ ಎಂದು ಡಿಎಂಕೆಯ ಟಿ ಆರ್ ಬಾಲು ಅವರು ಕೇಂದ್ರದ ಪ್ರಸ್ತಾಪವನ್ನು ಪ್ರಬಲವಾಗಿ ವಿರೋಧಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
