ಪಾಕ್ ನ ವಾಟ್ಸ್ ಅಪ್ ಗೂಢಾಚಾರನ ಬಂಧನ…!!!!

ಅಮೃತಸರ್
      ಇಷ್ಟೆಲ್ಲಾ ಜಾಗತೊಕ ಮಟ್ಟದಲ್ಲಿ ಮರ್ಯಾದೆ ಕಳೆದುಕೊಂಡು ಬೈಯಿಸಿಕೊಳ್ಳುತ್ತಿದ್ದರು ತನ್ನ ನೀಚ ಬುದ್ಧಿಯನ್ನು ಬಿಟ್ಟು ಬಾಳುವುದನ್ನು ಕಲಿಯುವ ಯಾವೊಂದು ಲಕ್ಷಣವೂ ಕಾಣಿಸುತ್ತಿಲ್ಲ.
 
       ಇಂದು ಪಂಜಾಬ್ ಪ್ರಾಂತ್ಯದ ಗಡಿರೇಖೆಗೆ ಹತ್ತಿರ ಇರುವಂತಹ ಒಂದು ಊರಿನಲ್ಲಿ ಪಾಕಿಸ್ತಾನದ ಗೂಢಚಾರನೊಬ್ಬನನ್ನು ಪಂಜಾಬ್ ಗಡಿ ಭಾಗದಲ್ಲಿ ಬಿಎಸ್ ಎಫ್ ಯೋಧರು ಬಂಧಿಸಿದ್ದಾರೆ. ಭಾರತ-ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಇರುವಾಗಲೇ ಈ ಬಂಧನವಾಗಿರುವುದು ಗಮನಾರ್ಹ ಸಂಗತಿ.  ಪಂಜಾಬ್ ಫಿರೋಜ್  ಪುರದಲ್ಲಿ ಬಿಎಸ್ ಎಫ್ ಯೋಧರು ಪಾಕ್ ಗೂಢಚಾರನನ್ನು ಬಂಧಿಸಿದೆ ಬಂಧಿತನನ್ನು ಮೊಹಮ್ಮದ್ ಶಾರುಖ್(21) ಎಂದು ಗುರುತಿಸಲಾಗಿದ್ದು ಈತ ಪಾಕಿಸ್ತಾನದ ಮೊರಾದಾಬಾದ್  ಗೆ ಸೇರಿದವನು ಎನ್ನಲಾಗಿದೆ.
      ಬಂಧಿತನ ಬಳಿಯಿದ್ದ ಮೊಬೈಲ್ ಅನ್ನು ಬಿಎಸ್ ಎಫ್ ವಶಕ್ಕೆ ಪಡೆದಿದ್ದು ಇದರಲ್ಲಿ ಆತ ಫಾಕಿಸ್ತಾನದ ಆರಕ್ಕೂ ಹೆಚ್ಚು ಶಂಕಿತ ವಾಟ್ಸ್ ಅಪ್ ಗ್ರೂಪ್ ನಲ್ಲಿ ಸಕ್ರಿಯನಾಗಿರುವುದು ತಿಳಿದುಬಂದಿದೆ.ಅನುಮಾನಾಸ್ಪದವಾಗಿ ಗಡಿಭಾಗದಲ್ಲಿ ಫೋಟೋ ತೆಗೆಯುತ್ತಿದ್ದ ವೇಳೆ ಈತನನ್ನು ಬಂಧಿಸಿದ್ದಾಗಿ ಬಿಎಸ್ ಎಫ್ ಹೇಳಿದೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link