ನವದೆಹಲಿ:
ವಿಶ್ವದಲ್ಲಿ ಎಲ್ಲಾ ದೇಶಗಳಿಗೂ ತನ್ನದೇ ಆದ ಬಲ ಮತ್ತು ದುರ್ಬಲತೆಗಳು ಇರುತ್ತವೆ ಅಂತಹ ಬಲಗಳಲ್ಲಿ ಒಂದಾದ ಪಾಸ್ ಪೊರ್ಟ್ ಬಳಸಿ ವೀಸಾ ಇಲ್ಲದೇ ಎಷ್ಟು ದೇಶಗಳಲ್ಲಿ ಸುತ್ತಾಡಬಹುದು ಎಂಬ ಅಂಶದ ಮೇಲೆ ಪಾಸ್ ಪೋರ್ಟ್ ನ ಶಕ್ತಿ ನಿರ್ಧಾರವಾಗುತ್ತದೆ.
ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಎಂಬ ಹೆಗ್ಗಳಿಕೆಯನ್ನು ಜಪಾನ್ ಪಾಸ್ ಪೋರ್ಟ್ ಮತ್ತೊಮ್ಮೆ ಮುಡಿಗೇರಿಸಿಕೊಂಡಿದೆ.
“ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್” ನಲ್ಲಿ ಸತತ ಮೂರನೇ ಬಾರಿ ತನ್ನ ಆಗ್ರ ಶ್ರೇಯಾಂಕವನ್ನು ಜಪಾನ್ ಪಾಸ್‌ಪೋರ್ಟ್ ಕಾಯ್ದುಕೊಂಡಿದೆ. ಏಕೆಂದರೆ… ಈ ಪಾಸ್ ಪೋರ್ಟ್ ನೊಂದಿಗೆ ವೀಸಾ ಇಲ್ಲದೆ ವಿಶ್ವದ ೧೯೧ ದೇಶಗಳಿಗೆ ತೆರಳಬಹುದು. ಸಿಂಗಾಪುರ ಪಾಸ್‌ಪೋರ್ಟ್ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕೊರಿಯಾ ಮತ್ತು ಜರ್ಮನಿ ನಂತರದ ಸ್ಥಾನದಲ್ಲಿವೆ.
ವೀಸಾ ಇಲ್ಲದೆ ೧೮೮ ದೇಶಗಳಿಗೆ ಭೇಟಿ ನೀಡಬಹುದಾದ ಫಿನ್ ಲ್ಯಾಂಡ್, ಇಟಲಿ ಪಾಸ್ ಪೋರ್ಟ್ ಗಳು ೪ ನೇ ಸ್ಥಾನದಲ್ಲಿ, ೧೮೭ ದೇಶಗಳಿಗೆ ಭೇಟಿ ನೀಡಬಹುದಾದ ಡೆನ್ಮಾರ್ಕ್, ಲಕ್ಸೆಂಬರ್ಗ್, ಸ್ಪೇನ್, ಐದನೇ ಸ್ಥಾನದಲ್ಲಿ, ೧೮೬ ದೇಶಗಳಲ್ಲಿ ಪ್ರವಾಸ ಕೈಗೊಳ್ಳಬಹುದಾದ ಫ್ರಾನ್ಸ್, ಸ್ವೀಡನ್, ಆಸ್ಟ್ರಿಯಾ, ಐರ್ಲೆಂಡ್, ಫ್ರಾನ್ಸ್, ಏಳನೇ ಸ್ಥಾನದಲ್ಲಿ ಆಯ್ಕೆಯಾಗಿವೆ.
ಆಸ್ಟ್ರೇಲಿಯಾ, ಕೆನಡಾ, ಜೆಕ್ ರಿಪಬ್ಲಿಕ್, ಮಾಲ್ಟಾ ಮತ್ತು ನ್ಯೂಜಿಲೆಂಡ್ ಒಂಬತ್ತನೇ ಸ್ಥಾನದಲ್ಲಿದ್ದರೆ, ಹಂಗೇರಿ, ಲಿಥುವೇನಿಯಾ ಮತ್ತು ಸ್ಲೋವಾಕಿಯಾ ಪಾಸ್‌ಪೋರ್ಟ್‌ಗಳನ್ನು ಒಂಬತ್ತನೇ ಸ್ಥಾನದಲ್ಲಿ ಆಯ್ಕೆ ಮಾಡಲಾಗಿದೆ. ವೀಸಾ ಇಲ್ಲದೆ, ಕೇವಲ ೫೮ ದೇಶಗಳಿಗೆ ಸುತ್ತಾಡಬಹುದಾದ ಭಾರತೀಯ ಪಾಸ್‌ಪೋರ್ಟ್‌ನ್ನು ೮೪ ನೇ ಸ್ಥಾನದಲ್ಲಿವೆ. ೨೦೧೯ ರಲ್ಲಿ ೮೬ ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ ಎರಡು ಸ್ಥಾನಗಳಷ್ಟು ಸುಧಾರಿಸಿದೆ.