ನವದೆಹಲಿ
ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆಯಾದ ಸಿಬಿಐ ಏಕೆ ಕೇವಲ ರಾಜಕೀಯವಲ್ಲದ ಪ್ರಕರಣಗಳಲ್ಲಿ ಹೆಚ್ಚು ಆಸಕ್ತಿ ಮತ್ತು ಯಶಸ್ವಿಯಾಗುವುದೇಕೆ? ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರಜನ್ ಗೊಗೊಯ್ ಪ್ರಶ್ನಿಸಿದ್ದಾರೆ.
ನ್ಯಾಯಮೂರ್ತಿ ರಂಜನ್ ಗೊಗೊಯ್, ಎರಡು ವರ್ಷಗಳ ಅಂತರದ ನಂತರ ನಡೆಸಿದ ಡಿಪಿ ಕೊಹ್ಲಿ ಸ್ಮಾರಕ ಉಪನ್ಯಾಸದ 18 ನೇ ಆವೃತ್ತಿಯಲ್ಲಿ, ಸಿಬಿಐನ ಸಾಮರ್ಥ್ಯ ಹಾಗು ದೌರ್ಬಲ್ಯಗಳ ಬಗ್ಗೆ ಮಾತನಾಡಿದರು. “ಅನೇಕ ಉನ್ನತ ಮತ್ತು ಸೂಕ್ಷ್ಮ ಪ್ರಕರಣಗಳಲ್ಲಿ ಸಿಬಿಐ ನ್ಯಾಯಾಂಗ ವಿಚಾರಣೆಯ ಮಾನದಂಡಗಳನ್ನು ಪೂರೈಸಿಲ್ಲ ಎಂಬುದು ನಿಜ” ಎಂದು ಹೇಳಿದ್ದಾರೆ.
ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಈ ಸಂಸ್ಥೆಗೆ ಸಾಕಷ್ಟು ಸಾಮರ್ಥ್ಯವಿದೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ ಎಂದು ಹೇಳಿದರಲ್ಲದೇ ತನಿಖೆಯ ಸಮಯದಲ್ಲಿ, ಒಬ್ಬ ವ್ಯಕ್ತಿಯ ಸ್ಥಿತಿ ಏನೆಂದು ಸಿಬಿಐ ನೋಡುವುದಿಲ್ಲ. ವ್ಯಾಪಕ ರಾಜಕೀಯ ಹಸ್ತಕ್ಷೇಪದಿಂದ ಸಿಬಿಐನ ಕಾರ್ಯವನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಅದೇ ಸಮಯದಲ್ಲಿ, ಸಿಬಿಐ ನಿರ್ದೇಶಕ ರಿಷಿ ಕುಮಾರ್ ಶುಕ್ಲಾ ಅವರು ಸಂಕೀರ್ಣ ಪ್ರಕರಣಗಳಲ್ಲಿ ನ್ಯಾಯಸಮತ ಮತ್ತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದಾಗ ಜನರು ಮೊದಲು ಕೇಳುವುದು ಸಿಬಿಐಗೆ ಕೊಡಿ ಎಂದು.ಇನ್ನು ಸಿಬಿಐ ಸರ್ಕಾರ, ನ್ಯಾಯಾಂಗ ಮತ್ತು ಜನರ ವಿಶ್ವಾಸವನ್ನು ಗಳಿಸಿದೆ. ಸಿಬಿಐ ಯಾವಾಗಲೂ ತನ್ನ ಜವಾಬ್ದಾರಿಗಳನ್ನು ಸಮರ್ಪಣೆಯೊಂದಿಗೆ ನಿರ್ವಹಿಸಲು ಪ್ರಯತ್ನಿಸಿದೆ ಎಂದು ಹೇಳಿದರು. ಸಿಬಿಐಗೆ ಸಹಾಯ ಮಾಡುವಲ್ಲಿ ಮತ್ತು ದಾರಿ ತೋರಿಸುವಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಪ್ರಮುಖ ಪಾತ್ರ ವಹಿಸಿವೆ ಎಂದು ಕುಮಾರ್ ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಸಿಬಿಐ ಅನ್ನು “ಹಲ್ಲುಕಿತ್ತ ಹುಲಿ” ಎಂದು ಕರೆಯಲಾಗಿತ್ತು ಆದರೆ ಸಿಬಿಐ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಕೆಲಸ ಮಾಡಿದೆ ಎಂದು ಸಿಬಿಐ ಕಾರ್ಯವನ್ನು ಶ್ಲಾಗಿಸಿದ್ದಾರೆ.