ನವದೆಹಲಿ:
ಸಿಬಿಡಿಟಿ ಸದಸ್ಯ ಅಕಿಲೇಶ್ ರಂಜನ್ ನೇತೃತ್ವದಲ್ಲಿ ಸರ್ಕಾರ ರಚಿಸಿರುವ ನೇರ ತೆರಿಗೆ ಸಂಹಿತೆಯ ಕಾರ್ಯಪಡೆ ಹೊಸ ತೆರಿಗೆ ನಿಯಮದ ಕುರಿತಾಗಿ ತನ್ನ ಮಧ್ಯಂತರ ವರದಿಯಲ್ಲಿ ಪ್ರಸ್ತಾಪಿಸಿದೆ. ಇದು ಕಳೆದ 58 ವರ್ಷಗಳ ಹಿಂದಿನ ತೆರಿಗೆ ದರಗಳ ಬದಲಾವಣೆ ಕುರಿತಾಗಿ ಬದಲಾವಣೆ ತರುವುದಕ್ಕೆ ಶಿಫಾರಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಉನ್ನತ ಮೂಲಗಳ ಪ್ರಕಾರ ವಾರ್ಷಿಕ ರೂ. 5 ಲಕ್ಷ ದಿಂದ 10 ಲಕ್ಷ ರೂ ಆದಾಯ ಇರುವವರು ಇನ್ನು ಮುಂದೆ ಶೇ.10ರಷ್ಟನ್ನು ತೆರಿಗೆ ರೂಪದಲ್ಲಿ ಕಟ್ಟ ಬೇಕಾಗುತ್ತದೆ ಇದರಿಂದ ಮುಂಚೆ ಇದ್ದ ತೆರಿಗೆ ಪದ್ದತಿಯೂ ಅಳಿಸಿಹೋಗಿ ಆರ್ಥಿಕ ಸಮತೋಲನ ಮತ್ತು ಮಾರುಕಟ್ಟೆ ತಲ್ಲಣಗಳಿಂದ ವಿಮುಕ್ತಿಗೆ ದಾರಿಯಾಗಬಹುದು ಎಂದು ಸಮಿತಿಯ ಸದಸ್ಯರು ತಿಳಿಸಿದ್ದಾರೆ.
ಪ್ರಸ್ತುತ, ವೈಯಕ್ತಿಕ ಆದಾಯ ತೆರಿಗೆ ಇಲಾಖೆಯಲ್ಲಿ 2.5 ಲಕ್ಷದಿಂದ 5ಲಕ್ಷದವರೆಗೆ ಸುಮಾರು 5% , 5-10ಲಕ್ಷಕ್ಕೆ 20% , 10 ಲಕ್ಷ ಮೇಲ್ಪಟ್ಟು 30% ಇದೆ ಇದನ್ನು ಬದಲಾಯಿಸಿ ತೆರಿಗೆ ಸಂಗ್ರಹವನ್ನು ಹೆಚ್ಚು ಮಾಡಲು ಇಲಾಖೆ ಮುಂದಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಆದಾಗ್ಯೂ, 2019 ರ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದಂತೆ ರೂ. 5 ಲಕ್ಷದ ವರೆಗೆ ಶೂನ್ಯ ತೆರಿಗೆ ವಿಧಿಸಲಾಗುವುದು ಮತ್ತು ಆಗಸ್ಟ್ 19 ರಂದು ಈ ವರದಿಯನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಲಾಗಿದ್ದರೂ ಅದನ್ನು ಇನ್ನೂ ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಮೂಲಗಳ ಪ್ರಕಾರ, ರೂ. 20 ಲಕ್ಷ ಮೇಲ್ಪಟ್ಟು ಆದಾಯ ಇರುವವರಿಗೆ ಶೇಕಡ 30 ರಷ್ಟು ತರಿಗೆ ವಿಧಿಸಲು ಸಮಿತಿ ಶಿಫಾರಸ್ಸು ಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ