ಮುಂಬೈ:
ದೇಶೀಯ ಷೇರುಗಳು ಮತ್ತು ರೂಪಾಯಿ ಮೌಲ್ಯದ ಭಾರಿ ಕುಸಿತಕ್ಕೆ ಕಾರಣವಾಗಿರುವ ವಿದೇಶಿ ನಿಧಿ ಹೊರಹರಿವಿಕೆ ಯಿಂದಾಗಿ ಕೆಲ ತಿಂಗಳಿಂದ ಪತನದ ಹಾದಿ ಹಿಡಿದಿರುವ ಷೇರುಪೇಟೆಯನ್ನು ಮೇಲೆತ್ತಲು ಕೇಂದ್ರ ಸರ್ಕಾರದ ನೀತಿ ಸಡಿಲಿಕೆ ಮುಂತಾಗಿರುವ ಕ್ರಮಗಳಿಂದ ಬೆಳವಣಿಗೆ ಹೆಚ್ಚಿಸಲು ಮತ್ತು ಕಚ್ಚಾ ತೈಲ ಬೆಲೆಗಳಿಂದ ಲಾಭವನ್ನು ಪಡೆಯುವುದು ಮತ್ತು ಅವುಗಳ ಲಾಭದಿಂದ ಮಾರುಕಟ್ಟೆಗೆ ನವಚೈತನ್ಯ ತುಂಬುವುದು ಇವು ಕೇಂದ್ರದ ಸದ್ಯದ ಅಸ್ತ್ರಗಳು ಇವು ಫಲಿಸಬೇಕಾದರೆ ವಿದೇಶಿ ಹೊರ ಹರಿವನ್ನು ನಿಯಂತ್ರಿಸದೇ ಬೇರೆ ದಾರಿ ಇಲ್ಲಾ ಎಂದು ತಜ್ಞರು ತಿಳಿಸಿದ್ದಾರೆ.
ಅಮೇರಿಕ ಚೀನಾ ಟ್ರೇಡ್ ವಾರ್ ನಿಂದಾಗಿ ಜಾಗತಿಕ ಮಾರುಕಟ್ಟೆ ತಲ್ಲಣಕೊಳಗಾಗಿದ್ದು ಇದರಿಂದಾಗಿ ಲಾಭ ಯಾರಿಗೆ ಎಂದು ನೋಡಿದರೆ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಎಂಬುದು ತಜ್ಞರ ಅಭಿಪ್ರಾಯ.
ಇದಲ್ಲದೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ ಇತ್ತೀಚಿನ ಸುಧಾರಣಾ ಕ್ರಮಗಳು ಹೂಡಿಕೆದಾರರಗೆ ಹೊಸ ಉತ್ತೇಜನ ಮತ್ತು ಆರ್ಥಿಕತೆಯಲ್ಲಿನ ವಿಶ್ವಾಸವನ್ನು ಮರಳಿ ತರುವಲ್ಲಿ ಯಶಸ್ವಿಯಾಗಬಹುದು ಎಂದು ವೀಕ್ಷಕರು ಆಶಾಭಾವನೆ ವ್ಯಕ್ತ ಪಡಿಸಿದ್ದಾರೆ.
ವಿದೇಶಿ ಹೂಡಿಕೆದಾರರ ವಿಶ್ವಾಸ ಮತ್ತು ಗಮನವನ್ನು ಸೆಳೆಯಲು ಈ ಹಿಂದೆ ವಿಧಿಸುತ್ತಿದ್ದ ಹೆಚ್ಚುವರಿ ಶುಲ್ಕವನ್ನು ಸರ್ಕಾರ ಹಿಂತೆಗೆದುಕೊಳ್ಳುವ ಮೂಲಕ ದಿಟ್ಟ ಕ್ರಮವನ್ನು ಕೈಗೊಂಡಿದೆ ಎಂದು ತಜ್ಞರು ತಿಳಿಸಿದ್ದಾರೆ.
“ಪ್ರಸ್ತುತ ಸರ್ಕಾರದ ಪ್ರಕಟಣೆಗಳು ದೇಶೀಯ ಮತ್ತು ಅಂತರರಾಷ್ಟ್ರೀಯ ಹೂಡಿಕೆದಾರರ ಭಾವನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ ,ಈಕ್ವಿಟಿ ಮತ್ತು ಕರೆನ್ಸಿ ಮಾರುಕಟ್ಟೆಗಳು ಕುಸಿತವನ್ನು ತಡೆದುಕೊಂಡು ಸ್ಥಿರಗೊಳ್ಳುವ ಸಾಧ್ಯತೆಯಿದೆ” ಎಂದು ಎಡೆಲ್ವೀಸ್ ವೃತ್ತಿಪರ ಹೂಡಿಕೆದಾರರ ಸಂಶೋಧನಾ ಮುಖ್ಯ ಮಾರುಕಟ್ಟೆ ತಂತ್ರಜ್ಞ ಸಾಹಿಲ್ ಕಪೂರ್ ತಿಳಿಸಿದರು.
ಆದರು ಎಲ್ಲಾ ಮಾರುಕಟ್ಟೆ ತಜ್ಞರ ಮನಸಿನಲ್ಲಿ ಉಳಿದುಕೊಂಡಿರುವ ಏಕೈಕ ಪ್ರಶ್ನೆ ಎಂದರೆ ” ಮತ್ತೆ ಪುದೇಳುವುದೇ ಮಾರುಕಟ್ಟೆ”
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
